ನಿರಂತರವಾಗಿ ಮಳೆ ಸುರಿಯುತ್ತಿದ್ದ ಸಮಯದಲ್ಲಿ ದಿಢೀರನೇ ಕೆಜಿ ಒಂದಕ್ಕೆ 100 ರೂಪಾಯಿ ತಲುಪಿದ್ದ ಟೊಮೇಟೊ ಬೆಲೆ ಈ ವಾರ ಕುಸಿದಿದೆ. ನಗರದ ಎಂ.ಜಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೊಮೇಟೊ ರೂ.60 ಕ್ಕೆ ಸಿಗುತ್ತಿದೆ, ತಳ್ಳುವ ಗಾಡಿಗಳಲ್ಲಿ 50ರಿಂದ 55 ರವರೆಗೆ ಬೆಲೆಯಿದೆ. ಮಳೆ ಕಡಿಮೆಯಾಗಿರುವುದರಿಂದ ಟೊಮೇಟೊ ಬೆಳೆಯೂ ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ವಾರ ಧಾರಣೆ ಇನ್ನಷ್ಟು ಕುಸಿಯಲಿದೆ ಎನ್ನುತ್ತಾರೆ ವ್ಯಾಪಾರಿಗಳು,. ಮಳೆ ನಿಲ್ಲುವ ಲಕ್ಷಣ ಕಾಣದಿದ್ದರೂ, ನಗರದಲ್ಲಿ