ನವದೆಹಲಿ : ವಿದ್ಯುತ್ ಬಿಕ್ಕಟ್ಟನ್ನು ಪರಿಹರಿಸಲು ಭಾರತೀಯ ರೈಲ್ವೇ ದೇಶಾದ್ಯಂತ 650 ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.ವಿದ್ಯುತ್ ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಲ್ಲಿದ್ದಲು ಹೊತ್ತ ರೈಲುಗಳ ಸಾಗಾಟ ಸುಗಮವಾಗಲು ತಾತ್ಕಾಲಿಕವಾಗಿ ಕೆಲ ಪ್ರಯಾಣಿಕರ ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೇ ರದ್ದುಗೊಳಿಸಿದೆ. ರದ್ದುಗೊಳಿಸದೇ ಇರುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.ದೇಶಾದ್ಯಂತ ವಿದ್ಯುತ್ ಬೇಡಿಕೆ ತೀವ್ರಗೊಂಡಿದ್ದು ಕಲ್ಲಿದ್ದಲು ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರೈಲ್ವೇಯು ಕಲ್ಲಿದ್ದಲು ಸಾಗಿಸುವ ರೇಕ್ಗಳು ವಿದ್ಯುತ್ ಸ್ಥಾವರಗಳನ್ನು ವೇಗವಾಗಿ