ಬೆಂಗಳೂರು : ದೇಶದ 29 ಸಾಧಕ ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರದಾನ ಮಾಡಿದರು. ವಿವಿಧ ವಿಭಾಗಗಳಲ್ಲಿ ಸಾಧನೆಗೈದ ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗಿದ್ದು, ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ. ಸಂಗೀತ ಮತ್ತು ಮನರಂಜನೆ ವಿಭಾಗದಲ್ಲಿ (ಪಿಯಾನೋ) ಸೈಯದ್ ಫತ್ತಿನ್ ಅಹಮದ್ ಹಾಗೂ ಸಮಾಜ ಸೇವೆ ವಿಭಾಗದಲ್ಲಿ ಅಭಿನವ್ ಚೌಧರಿಗೆ ವರ್ಚ್ಯುವಲ್ ಸಭೆಯ ಮೂಲಕ ಬಾಲ ಪುರಸ್ಕಾರ ಪ್ರಶಸ್ತಿ