ಬೆಂಗಳೂರು (ಜುಲೈ 04); ಕೊರೋನಾ ಎರಡನೇ ಅಲೆ ರಾಜ್ಯದಲ್ಲಿ ಅಪಾರ ಸಾವು-ನೋವಿಗೆ ಕಾರಣವಾಗಿತ್ತು. ಪರಿಣಾಮ ಕಳೆದ ತಿಂಗಳು ಲಾಕ್ಡೌನ್ ಹೇರಲಾಗಿತ್ತು. ಆದರೆ, ಇದೀಗ ಕೊರೋನಾ ಅಲೆ ಕ್ರಮೇಣ ಇಳಿಕೆಯಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಹಂತಹಂತವಾಗಿ ಅನ್ಲಾಕ್ ಮಾಡಲಾಗುತ್ತಿದೆ. ಈಗಾಗಲೇ ಎರಡು ಹಂತದಲ್ಲಿ ಅನ್ಲಾಕ್ ಮಾಡಲಾಗಿತ್ತು, ಕೆಲವು ವಿಭಾಗಗಳನ್ನು ಹೊರತುಪಡಿಸಿ ಬಹುತೇಕ ಕ್ಷೇತ್ರಗಳಿಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಜನ ಸಹ ರಸ್ತೆಗೆ ಇಳಿದು ಓಡಾಡಲು ಆರಂಭಿಸಿದ್ದಾರೆ. ಆರ್ಥಿಕತೆ ಪುನಃ ಚೇತರಿಕೆಯ ಹಾದಿ ಹಿಡಿದಿದೆ.