ನವದೆಹಲಿ : ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್ಪಿಸಿಐ) ವಾಟ್ಸಪ್ಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(ಯುಪಿಐ) ಮೂಲಕ ಡಿಜಿಟಲ್ ಪಾವತಿಯ ಸೇವೆಗಳನ್ನು 10 ಕೋಟಿ ಬಳಕೆದಾರರಿಗೆ ಒದಗಿಸಲು ಅನುಮತಿ ನೀಡಿದೆ.ಎನ್ಸಿಪಿಐ ಕಳೆದ ವರ್ಷ ನವೆಂಬರ್ನಲ್ಲಿ ವಾಟ್ಸಪ್ಗೆ 2 ಕೋಟಿ ಬಳಕೆದಾರರಿಗೆ ನೀಡಿದ್ದ ಸೇವೆಯ ಅನುಮತಿಯನ್ನು ದ್ವಿಗುಣಗೊಳಿಸಿತ್ತು. ಇದೀಗ 10 ಕೋಟಿ ಬಳಕೆದಾರರಿಗೆ ಯುಪಿಐ ಸೇವೆ ನೀಡಲು ಅನುಮತಿ ನೀಡಿದೆ. ವಾಟ್ಸಪ್ ಭಾರತದಲ್ಲಿ ತನ್ನ ಎಲ್ಲಾ ಬಳಕೆದಾರರಿಗೂ ಯಾವುದೇ ಮಿತಿಯಿಲ್ಲದೇ ತನ್ನ ಯುಪಿಐ ಸೇವೆಯನ್ನು