ತಿರುವನಂತಪುರಂ : ಕೇರಳದಲ್ಲಿ ಕೊವಿಡ್ -19 ಪ್ರಕರಣಗಳ ಏರಿಕೆಯಿಂದಾಗಿ 1 ರಿಂದ 9 ನೇ ತರಗತಿಯ ಶಾಲೆಗಳು ಮುಂದಿನ ಆದೇಶದವರೆಗೆ ಮುಚ್ಚಲು ತೀರ್ಮಾನಿಸಲಾಗಿದೆ. ಇಂದು ಜನವರಿ 14 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಜನವರಿ 21 ರಿಂದ ಪ್ರಾರಂಭವಾಗುವ ಎರಡು ವಾರಗಳವರೆಗೆ 9 ನೇ ತರಗತಿಯವರೆಗಿನ ಆಫ್ಲೈನ್ ತರಗತಿಗಳನ್ನು ಸ್ಥಗಿತಗೊಳಿಸಲಾಗುತ್ತದೆ.ಆದಾಗ್ಯೂ, 10 ರಿಂದ 12 ನೇ ತರಗತಿಗಳಿಗೆ