ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಸಾಮಾನ್ಯ ಸೊಳ್ಳೆಯಿಂದ ಹರಡುವ ರೋಗವಾದ ಮಲೇರಿಯಾ ವಿರುದ್ಧ ವಿಶ್ವದ ಮೊದಲ ಲಸಿಕೆಯ ವ್ಯಾಪಕ ಬಳಕೆಯನ್ನು ಅನುಮತಿಸಿದೆ. ಮಲೇರಿಯಾದಿಂದಲೇ ಪ್ರತಿ ವರ್ಷ ನಾಲ್ಕು ಲಕ್ಷಕ್ಕೂ ಹೆಚ್ಚು ಜೀವಗಳು ಬಲಿಯಾಗುತ್ತಿವೆ. ಈ ಹಿನ್ನೆಲೆ ಅಭಿವೃದ್ಧಿಪಡಿಸಿದ, RTS, S/AS01 ಎಂದು ಕರೆಯಲ್ಪಡುವ ಲಸಿಕೆಗೆ ಒಪ್ಪಿಗೆ ದೊರೆತಿದೆ. ಈ ಲಸಿಕೆಯನ್ನು ಪೈಲೆಟ್ ಕಾರ್ಯಕ್ರಮದ ಭಾಗವಾಗಿ ಈಗಾಗಲೇ ಘಾನಾ, ಕೀನ್ಯಾ ಮತ್ತು ಮಲಾವಿಯಲ್ಲಿ ಸುಮಾರು 8 ಲಕ್ಷ ಮಕ್ಕಳಿಗೆ ನೀಡಲಾ ಗಿದೆ.