ಬೆಂಗಳೂರು : ದೇಶದಲ್ಲಿ ಹೆಚ್3ಎನ್2 ವೈರಸ್ ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯಗಳಿಗೆ ಕೇಂದ್ರದಿಂದ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ. ಕೋವಿಡ್ ಬಳಿಕ ದೇಶದಲ್ಲಿ ಮತ್ತೊಂದು ವೈರಸ್ ಕಾಟ ಆರಂಭವಾಗಿದೆ. ಈ ವಿಚಾರದ ಬಗ್ಗೆ ತಜ್ಞರ ಜೊತೆಗೆ ಮಾರ್ಚ್ 6ರಂದು ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಲಿದೆ ಎಂದು ಮಾಹಿತಿ ನೀಡಿದೆ.ಕೋವಿಡ್ ಎನ್ನುವ ಮಹಾಮಾರಿ ರಾಜ್ಯ ಬಿಟ್ಟು ಬಹುತೇಕ ತೊಲಗಿದೆ. ಆದರೆ ಈಗ ಹೆಚ್3ಎನ್2 ರೂಪದಲ್ಲಿ ಮತ್ತೊಂದು ವೈರಸ್ ದೇಶದ ಜನರಿಗೆ