ಕೀವ್ : ಮುಂಬರುವ ಹೊಸ ವರ್ಷ ಉಕ್ರೇನ್ ಪಾಲಿಗೆ ಕಹಿಯಾಗಿದೆ. ಕೆಲ ದಿನಗಳಿಂದ ಬಿಡುವು ನೀಡಿದ್ದ ರಷ್ಯಾ-ಉಕ್ರೇನ್ ಯುದ್ಧ ಮತ್ತೊಮ್ಮೆ ಭೀಕರ ಸ್ವರೂಪಕ್ಕೆ ತಿರುಗುವುದು ಖಚಿವಾಗಿದೆ.2023ರ ಹೊಸ ವರ್ಷದ ಆರಂಭದಲ್ಲಿ ರಷ್ಯಾದಿಂದ ಮತ್ತೆ ದಾಳಿ ಎದುರಾಗುವ ಬಗ್ಗೆ ಉಕ್ರೇನ್ ಸಶಸ್ತ್ರ ಪಡೆಗಳ ಕಮಾಂಡರ್ ಮುಖ್ಯಸ್ಥ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.ರಷ್ಯಾ, ಉಕ್ರೇನ್ ಮೇಲಿನ ತನ್ನ ದಾಳಿಯನ್ನು ಮುಂದುವರಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಸುಮಾರು 2 ಲಕ್ಷ ಸೈನಿಕರನ್ನು ಒಳಗೊಂಡ ಹೊಸ ಸೇನಾಪಡೆಯನ್ನು ಸಿದ್ಧಪಡಿಸುತ್ತಿದೆ.