ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಎನ್ನುವುದು ಸಖತ್ ಟ್ರೆಂಡ್ ಆಗಿಬಿಟ್ಟಿದೆ. ಯಾರೇ ನೋಡಿದರೂ ವೆರೈಟಿ ಹಚ್ಚೆ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಆದರೆ ಈ ಹಚ್ಚೆ ಹಾಕಿಸಿಕೊಳ್ಳುವಾಗ ಬಹಳಾನೇ ಜಾಗರೂಕರಾಗಿರಬೇಕು, ಹಾಗೇ ಹಚ್ಚೆ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡಬಾರದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಹೌದು, ಹಚ್ಚೆ ಹಾಕಿಕೊಳ್ಳುವವರು 6 ತಿಂಗಳು ರಕ್ತದಾನ ಮಾಡಬಾರದಂತೆ, ಯಾಕೆಂದರೆ, ಟ್ಯಾಟೂ ಎನ್ನುವುದು ಬಹುತೇಕ ಎಲ್ಲಾ ವಯಸ್ಸಿನ ಜನರನ್ನೂ ಸೆಳೆದು ಬಿಡುತ್ತದೆ.ಮಕ್ಕಳಿಂದ ಹಿಡಿದು ದೊಡ್ಡವರವರೆಗೆ