ಮಂಗಳೂರು : ನಗರದಲ್ಲಿ ಇಂದು ಬೆಳಗ್ಗೆ ಸತತವಾಗಿ ಸುರಿದ ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳು, ಆಹಾರ ಪದಾರ್ಥಗಳು ನೀರು ಪಾಲಾಗಿದ್ದು, ರಸ್ತೆಗಳೆಲ್ಲ ನೀರು ತುಂಬಿಕೊಂಡು ಕೆರೆಯಂತಾಗಿದೆ.ಇಂದು ಮುಂಜಾನೆಯಿಂದ ಮೂರ್ನಾಲ್ಕು ಗಂಟೆ ನಿರಂತರವಾಗಿ ಸುರಿದ ಮಳೆಗೆ ಶಿವನಗರದಲ್ಲಿ ಐವತ್ತಕ್ಕೂ ಹೆಚ್ಚು ಮನೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ವಸ್ತಗಳೆಲ್ಲಾ ನೀರಿನಲ್ಲಿ ತೇಲಿದವು.ಎಲೆಕ್ಟ್ರಾನಿಕ್ ಉಪಕರಣಗಳು, ಹಾಸಿಗೆ, ಪಾತ್ರೆಗಳು, ಆಹಾರ ಪದಾರ್ಥಗಳೆಲ್ಲಾ ನೀರು ಪಾಲಾದವು. ಮನೆಯಿಂದ ನೀರು ಹೊರಹಾಕಲು