ಜಿನೇವಾ : ಕೊರೊನಾ ವೈರಸ್ ರೂಪಾಂತರಿ ತಳಿ ಓಮಿಕ್ರಾನ್ ಸೋಂಕು ಜನತೆಯಲ್ಲಿ ಮತ್ತೆ ಭಯ ಹುಟ್ಟಿಸಿದೆ2022ರಲ್ಲಿ ನಾವು ಕೊರೊನಾ ಸಾಂಕ್ರಾಮಿಕವನ್ನು ಸಂಪೂರ್ಣವಾಗಿ ಕೊನೆಗಾಣಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಡಾನೊಮ್ ಗೆಬ್ರೆಯೆಸಸ್ ಕರೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೆಡ್ರೋಸ್, ಎರಡನೇ ಬಾರಿಯೂ ಕೋವಿಡ್ ನೆರಳಿನಲ್ಲೇ ಕ್ರಿಸ್ಮಸ್ ಆಚರಿಸುವಂತಾಗಿದೆ. ಕೊರೊನಾ ಸಾಂಕ್ರಾಮಿಕವನ್ನು ಕೊನೆಗಾಣಿಸಲು ವಿಶ್ವದ ಎಲ್ಲಾ ಸರ್ಕಾರಗಳು ಒಂದಾಗಿ ಕೆಲಸ ಮಾಡಬೇಕು. 2022ರಲ್ಲಿ ನಾವು ಸಂಪೂರ್ಣವಾಗಿ ಕೋವಿಡ್ಗೆ ಅಂತಿಮ ಹಾಡಬೇಕು