ವಿವಾದ ಹುಟ್ಟುಹಾಕಿದ ಪ್ರಧಾನಿ ಮೋದಿ ಫೋಟೊ ಕುರಿತು ಏಮ್ಸ್ ವೈದ್ಯರು ಹೇಳಿದ್ದೇನು?

ನವದೆಹಲಿ, ಸೋಮವಾರ, 20 ಆಗಸ್ಟ್ 2018 (14:55 IST)

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರೊಂದಿಗೆ ನಗುತ್ತಾ ಮಾತನಾಡುತ್ತಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿವಾದಕ್ಕೆ ಕಾರಣವಾಗಿದೆ.


ಹೌದು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆ. 16 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ಬಳಿಕ ಪ್ರಧಾನಿ ಮೋದಿ ಆಸ್ಪತ್ರೆ ವೈದ್ಯರೊಂದಿಗೆ ನಗುತ್ತಾ ಮಾತನಾಡುತ್ತಿದ್ದರೇ? ಎಂಬ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಮಧ್ಯೆ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು,  ವಿವಾದಿತ ಚಿತ್ರವನ್ನು ಟ್ವೀಟ್ ಮಾಡಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಎಂದು ಬರೆದಿದ್ದಾರೆ.


ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಹಳೆ ಫೋಟೋ ಹಾಕಿ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಅಪಪ್ರಚಾರ ಮಾಡುತ್ತಿದ್ದಾರೆ. ಅವರ  ವಿರುದ್ಧ ಹಾಗೂ ಪೇಸ್ ಬುಕ್ ಖಾತೆದಾರರ ವಿರುದ್ಧ ಎಫ್ ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ. ಹಾಗೇ ದೆಹಲಿಯ ಏಮ್ಸ್‌ ಆಸ್ಪತ್ರೆಯ ವೈದ್ಯರು ಕೂಡ ಇದು ಹಳೇ ಫೋಟೋ ಎಂದು ಸ್ಪಷ್ಟನೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 11 ಮಂದಿ ಕಾಮುಕರ ಅಟ್ಟಹಾಸ

ರಾಂಚಿ : ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 11 ಜನ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ...

news

ದೇಹದ ತೂಕ ಇಳಿಸುವುದಕ್ಕಾಗಿ ಈ ಮಹಿಳೆ ಕುಡಿದಿದ್ದು ಏನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಿ!

ಬೆಂಗಳೂರು: 30 ವರ್ಷದ ಬಲಿಕಾ ಕೋಲಿನ್ಸ್ ಎಂಬ ಮಹಿಳೆ ದೇಹದ ತೂಕ ಇಳಿಸಿಕೊಳ್ಳಲು ವಿಚಿತ್ರವಾದ ...

news

ಪ್ರವಾಹದ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ ಕೇರಳದ ವ್ಯಕ್ತಿಗೆ ಗೇಟ್ ಪಾಸ್ ಕೊಟ್ಟ ದುಬೈ ಕಂಪನಿ

ದುಬೈ: ತನ್ನದೇ ರಾಜ್ಯ ಕೇರಳದಲ್ಲಿ ಪ್ರವಾಹದಿಂದ ಜನ ತತ್ತರಿಸುತ್ತಿದ್ದರೆ, ಇತ್ತ ಕೇರಳ ಮೂಲದ ದುಬೈನಲ್ಲಿ ...

news

ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಗೆ ಲಾಲೂ ಪ್ರಸಾದ್ ಯಾದವ್ ಸಲಹೆಗಾರರಂತೆ!

ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಮಾಜಿ ಕ್ರಿಕೆಟಿಗ, ಪಿಟಿಐ ನಾಯಕ ...