ಹೊಸ ದಿಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿ ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಕೊರೊನಾ ವೈರಾಣುವಿನ ಹೊಸ ರೂಪಾಂತರಿ ಒಮಿಕ್ರಾನ್ಗೂ ಲಸಿಕೆಯೇ ಮದ್ದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದ ನೂತನ ರೂಪಾಂತರಿ ಮೂಡಿಸಿದ್ದ ಆತಂಕ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಒಮಿಕ್ರಾನ್ ರೂಪಾಂತರಿಯು ಅಪಾಯಕಾರಿಯಾಗಿದ್ದು, ಕ್ಷಿಪ್ರವಾಗಿ ಪಸರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಇದು ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ.ಕೊರೊನಾ ದೀರ್ಘಕಾಲೀನ ಸಮಸ್ಯೆಯಾಗಿರುವುದರಿಂದ ಜಗತ್ತಿನಾದ್ಯಂತ ಈಗ ಲಸಿಕೆಯೇ ರೂಪಾಂತರಿಗಳ ವಿರುದ್ಧ ಹೋರಾಡುವ ನಿರ್ಣಾಯಕ ಅಸ್ತ್ರ