ಜಿನೇವಾ (ಆ.06): ಕೊರೋನಾ ವೈರಸ್ನಿಂದ ಅತಿಯಾಗಿ ಬಳಲಿದ್ದ ವ್ಯಕ್ತಿಗಳಲ್ಲಿ ಸೋಂಕಿನಿಂದ ಚೇತರಿಸಿಕೊಂಡ ಬಳಿಕವೂ ಅನೇಕ ದೀರ್ಘಕಾಲಿಕ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಈ ರೀತಿಯ ಸನ್ನಿವೇಶವನ್ನು ‘ದೀರ್ಘಾವಧಿ ಕೋವಿಡ್’ ಎಂದು ವಿಶ್ವಸಂಸ್ಥೆ ಗುರುತಿಸಿದೆ. ಸದ್ಯ ವಿಶ್ವದಲ್ಲೀಗ 20 ಕೋಟಿಗೂ ಅಧಿಕ ಮಂದಿಗೆ ಕೋವಿಡ್ ಬಂದಿರುವುದು ದೃಢಪಟ್ಟಿದೆ. ಆದರೆ, ಅವರಲ್ಲಿ ಎಷ್ಟುಮಂದಿ ದೀರ್ಘ ಕೋವಿಡ್ನಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿಲ್ಲ. ದೀರ್ಘಾವಧಿ ಕೋವಿಡ್ ಎನ್ನುವುದು ಕೊರೋನಾ