ದೆಹಲಿ : ಆಸ್ಟ್ರೇಲಿಯಾದ ಥೆರಪೆಟಿಕ್ ಗೂಡ್ಸ್ ಅಡ್ಮಿನಿಸ್ಟ್ರೇಷನ್ (ಟಿಜಿಎ) ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಹೆಸರಿನ ಕೊವಿಡ್ 19 ವಿರುದ್ಧದ ಲಸಿಕೆಯನ್ನು ಅಂಗೀಕರಿಸಿದೆ. ಈ ಲಸಿಕೆಯು ಆಸ್ಟ್ರೇಲಿಯಾದಲ್ಲಿ ರಿಜಿಸ್ಟರ್ ಆಗಿಲ್ಲ. ಆದರೆ ಗಣನೀಯ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು ಈ ಲಸಿಕೆಯನ್ನು ಹಾಕಿಸಿಕೊಂಡಿರುವುದನ್ನು ಗುರುತಿಸಿ ಈ ನಿರ್ಧಾರ ಕೈಗೊಂಡಿದೆ. ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಜೊತೆಗೆ ಚೀನಾದ BBIBP- CorV ಕೂಡ ಆಸ್ಟ್ರೇಲಿಯಾದ ಪಟ್ಟಿ ಸೇರಿಕೊಂಡಿದೆ. ಟಿಜಿಎಯು ಇತ್ತೀಚೆಗಿನ ವಾರದಲ್ಲಿ ಕಂಡುಕೊಂಡ ಮಾಹಿತಿಯನ್ನು ಮತ್ತು