ತರಗೆಲೆಯಂತೆ ಉದುರಿದ ಕಟ್ಟಡಗಳು. ಒಂದೆಡೆ ಅವಶೇಷಗಳಡಿ ಸಿಲುಕಿರುವ ಸಾವಿರಾರು ಜೀವಗಳ ಚೀತ್ಕಾರ. ಮತ್ತೊಂದೆಡೆ ತನ್ನವರನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಜನ.ಮಗದೊಂದೆಡೆ ಅವಶೇಷಗಳಡಿಯೇ ಸಮಾಧಿಯಾದ ಜೀವಗಳು. ಸೂರು ಕಳೆದುಕೊಂಡು ಬೀದಿಪಾಲಾದ ಬದುಕು. ಹೆತ್ತವರ ಕಳೆದುಕೊಂಡು ಅನಾಥರಾದ ಮಕ್ಕಳ ಆಕ್ರಂದನ.. ಈ ಕರುಣಾಜನಕ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸದೇ ಇರದು.ಇದು ಟರ್ಕಿ, ಸಿರಿಯಾ ರಾಷ್ಟ್ರಗಳ ದುರಂತ ಕಥೆ. ಪ್ರಕೃತಿ ಮುನಿಸು ಅದೆಷ್ಟು ಭಯಾನಕ? ಟರ್ಕಿ ಮತ್ತು ಸಿರಿಯಾ ರಾಷ್ಟ್ರಗಳು ಭೂಕಂಪಕ್ಕೆ ನಲುಗಿ ಹೋಗಿವೆ.