ನವದೆಹಲಿ: ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಬೇರೆ ಬೇರೆ ಪಕ್ಷಗಳ ನಾಯಕರು ರಾಜಕೀಯದ ಹೊರತಾಗಿ ಸ್ನೇಹದಿಂದ ಇರುವುದೇ ಇಲ್ಲ. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರ ವಿಚಾರದಲ್ಲಿ ಅದು ಸುಳ್ಳು ಎಂದು ಸಾಬೀತಾಗಿದೆ. ನಿನ್ನೆ ವಾಜಪೇಯಿ ಗಂಭೀರ ಎಂಬ ಸುದ್ದಿ ತಿಳಿದಾಗಿನಿಂದ ಬಿಜೆಪಿಯೇತರ ರಾಜಕೀಯ ಪಕ್ಷಗಳ ನಾಯಕರೂ ತಮ್ಮ ವಿರೋಧಿ ಪಕ್ಷದ ನಾಯಕ ಎಂಬುದನ್ನೂ ಮರೆತು ವಾಜಪೇಯಿಗಾಗಿ ಪ್ರಾರ್ಥನೆ ಮಾಡಿದರು. ಅವರನ್ನು ಖುದ್ದಾಗಿ ಭೇಟಿ ಮಾಡಲು ಏಮ್ಸ್ ಗೆ ದೌಡಾಯಿಸಿದರು.ಇದು