ಪುಣೆ : ಬಾಯಿ ಬಾರದ 30 ವರ್ಷದ ಮಹಿಳೆಯೊಬ್ಬಳ ಮೇಲೆ ದೇಶ ಕಾಯುವ ನಾಲ್ವರು ಯೋಧರು ನಾಲ್ಕು ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ವಾಕ್ ಮತ್ತು ಶ್ರವಣ ದೊಷವಿರುವ ಮಹಿಳೆ ಖಡ್ಮಿಯ ಮಿಲಿಟರಿ ಆಸ್ಪತ್ರೆಯಲ್ಲಿ ಗ್ರೇಡ್ 4 ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಆಕೆಯ ಈ ಸಮಸ್ಯೆ ಇರುವುದನ್ನು ತಿಳಿದ ನಾಲ್ಕು ಜನ ಯೋಧರು ಆಕೆಯ ಮೇಲೆ ನಾಲ್ಕು ವರ್ಷಗಳಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಲೇ ಬಂದಿದ್ದಾರೆ.