ನೇಪಾಳದಲ್ಲಿ ಮಳೆ: ಸಂಕಷ್ಟಕ್ಕೆ ಸಿಲುಕಿದ 290 ಕರ್ನಾಟಕದ ಯಾತ್ರಾರ್ಥಿಗಳು

ನವದೆಹಲಿ| Krishnaveni K| Last Modified ಮಂಗಳವಾರ, 3 ಜುಲೈ 2018 (09:10 IST)
ನವದೆಹಲಿ: ಕೈಲಾಸ, ಯಾತ್ರೆಗೆಂದು ತೆರಳಿದ ಕರ್ನಾಟಕ ಮೂಲದ ಸುಮಾರು 290 ಯಾತ್ರಾರ್ಥಿಗಳು ನೇಪಾಳದಲ್ಲಿ ಮಳೆ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.


ನೇಪಾಳದ ಸಿಮಿಕೋಟ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಸಿಎಂ ಕುಮಾರಸ್ವಾಮಿ ದೆಹಲಿಯ ಕರ್ನಾಟಕ ಭವನದ ಸ್ಥಾನಿಕ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.


ಸೇನೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಯಾತ್ರಾರ್ಥಿಗಳಿಗೆ ನೆರವು ನೀಡುತ್ತಿದ್ದಾರೆ. ಯಾತ್ರೆ ಕೈಗೊಂಡವರಲ್ಲಿ ಹೆಚ್ಚಿನವರು ಮೈಸೂರು, ಮಂಡ್ಯ ಭಾಗದವರಾಗಿದ್ದಾರೆ. ಸಂತ್ರಸ್ತರ ಬಗ್ಗೆ ಕುಟುಂಬಸ್ಥರಿಗೆ ದೆಹಲಿಯ ರಾಯಭಾರ ಕಚೇರಿಯೂ ಸಹಾಯ ಮಾಡುತ್ತಿದೆ. ಕಳೆದ ನಾಲ್ಕು ದಿನಗಳಿಂದ ಪ್ರತಿಕೂಲ ಹವಾಮಾನದಿಂದಾಗಿ ಯಾತ್ರಾರ್ಥಿಗಳು ನೀರು, ಆಹಾರವಿಲ್ಲದೇ ಪರದಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :