ಬೆಂಗಳೂರು: ಚುನಾವಣೆಗೆ ಮೊದಲು ಜೆಡಿಎಸ್ ನಿಂದ ಉಚ್ಛಾಟನೆಗೊಂಡಾಗ ಎಚ್ ಡಿ ಕುಮಾರಸ್ವಾಮಿ ಸಿಎಂ ಆದರೆ ಶಿರಚ್ಛೇದ ಮಾಡಿಕೊಳ್ಳುತ್ತೇನೆ ಎಂದಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಇದೀಗ ಆಲ್ ಈಸ್ ವೆಲ್ ಎಂದಿದ್ದಾರೆ.ಕಾಂಗ್ರೆಸ್ ಜತೆ ಸೇರಿ ಇದೀಗ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸುತ್ತಿದ್ದಂತೇ ಜಮೀರ್ ಉಲ್ಟಾ ಹೊಡೆದಿದ್ದಾರೆ. ವಿಶ್ವಾಸ ಮತ ಪ್ರಕ್ರಿಯೆಗೆ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹಮ್ಮದ್ ನನ್ನ, ಕುಮಾರಸ್ವಾಮಿ ನಡುವಿನ ಸಂಬಂಧ ಚೆನ್ನಾಗಿದೆ ಎಂದಿದ್ದಾರೆ.ನಮ್ಮಿಬ್ಬರ ನಡುವಿನ ಅಸಮಾಧಾನವೆಲ್ಲವೂ ಸರಿಯಾಗಿದೆ.