ಜಿಎಸ್‌ಟಿ ಜಾರಿಯಿಂದ ಐತಿಹಾಸಿಕ ಫಲಿತಾಂಶ: ನಿರ್ಮಲಾ ಸೀತಾರಾಮನ್

Budget
ಬೆಂಗಳೂರು| rajesh patil| Last Updated: ಶನಿವಾರ, 1 ಫೆಬ್ರವರಿ 2020 (11:46 IST)
ನವದೆಹಲಿ:  ಜಿಎಸ್‌ಟಿ ಕಾರಣದಿಂದಾಗಿ ಪ್ರತಿ ಕುಟುಂಬ ತಮ್ಮ ಖರ್ಚಿನಲ್ಲಿ ಶೇ 4ರಷ್ಟು ಹಣವನ್ನು ಉಳಿಸುತ್ತಿದೆ. 60 ಲಕ್ಷ ಹೊಸ ತೆರಿಗೆ ಪಾವತಿದಾರರನ್ನು ನಾವು ಹುಡುಕಿದ್ದೇವೆ. ಸರಳ ತೆರಿಗೆ ಪಾವತಿ ವಿಧಾನವನ್ನು ರೂಪಿಸಿದ್ದೇವೆ. ತೆರಿಗೆ ಪಾವತಿ ಪ್ರಮಾಣವೂ ಹೆಚ್ಚಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 
ಮೂಲಸೌಕರ್ಯ ಮತ್ತು ಸಾರಿಗೆ ವಿಚಾರದಲ್ಲಿ ಜಿಎಸ್‌ಟಿಯಿಂದ ಸಾಕಷ್ಟು ಒಳ್ಳೆಯ ಫಲಿತಾಂಶಗಳು ಕಂಡು ಬಂದಿವೆ. ತೆರಿಗೆ ವಸೂಲಾತಿಯೂ ಪರಿಣಾಮಕಾರಿಯಾಗಿದೆ. ಕೆಲ ಕ್ಷೇತ್ರಗಳಲ್ಲಿ ತೆರಿಗೆ ಕಡಿತವಾಗಿದ್ದು, ಅದರ ಲಾಭ ಗ್ರಾಹಕರಿಗೆ ದೊರೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
 
ಸಮಾಜದ ಎಲ್ಲ ವರ್ಗಗಳ ಆಶೋತ್ತರಗಳನ್ನು ಬಿಂಬಿಸುವ ಬಜೆಟ್ ಇದು. 2014–19ರ ಅವಧಿಯಲ್ಲಿ ನಮ್ಮ ಸರ್ಕಾರವು ಅಡಳಿತದಲ್ಲಿ ಬದಲಾವಣೆ ತಂದಿತ್ತು. ಮೂಲಭೂತ ವ್ಯವಸ್ಥೆಯ ಬದಲಾವಣೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ನಾವು ಗಮನ ಕೊಟ್ಟೆವು. ಹಣದುಬ್ಬರ ನಿಯಂತ್ರಣದಲ್ಲಿಡುವ ಜೊತೆಗೆ ಬ್ಯಾಂಕ್‌ಗಳ ಕೆಟ್ಟ ಸಾಲದ ಬಗ್ಗೆ ಗಮನ ನೀಡಲಾಯಿತು.  ಅಂತೆಯೇ ತಮ್ಮ ಭಾಷಣದಲ್ಲಿ ಮಾಜಿ ವಿತ್ತ ಸಚಿವ, ದಿವಂಗತ ಅರುಣ್‌ ಜೇಟ್ಲಿ ಅವರನ್ನು ನೆನಪಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :