ಉತ್ಪಾದಕ ಚಕ್ರದ ಅದೃಷ್ಟ

ಇಳಯರಾಜ 

ಪ್ರಕೃತಿಯಲ್ಲಿ ಐದು ಬಗೆಯ ಮೂಲಾಧಾರಗಳು, ಮೂಲತತ್ವಗಳು ಇರುತ್ತವೆ. ಅದುವೇ ಕಾಷ್ಠ, ಅಗ್ನಿ, ಪೃಥ್ವಿ, ಧಾತು ಹಾಗೂ ಜಲ. ಈ ಮೂಲಾಧಾರಗಳು ಎರಡು ಬಗೆಯಿಂದ ಪರಸ್ಪರ ಸಂಬಂಧ ಹೊಂದಿರುತ್ತವೆ. ಅರ್ಥಾತ್ ಎರಡು ಬಗೆಯ ಕಾಲಚಕ್ರಗಳನ್ನು ಈ ಮೂಲತತ್ವಗಳು ಹೊಂದಿರುತ್ತವೆ.

ಒಂದು ಉತ್ಪಾದಕ ಚಕ್ರ ಹಾಗೂ ಮತ್ತೊಂದು ವಿಧ್ವಂಸಕ ಚಕ್ರ. ಉತ್ಪಾದಕ ಚಕ್ರ ಹೇಗಿರುತ್ತದೆ ಎಂದರೆ, ಕಾಷ್ಠ-ಅಗ್ನಿ-ಪೃಥ್ವಿ-ಧಾತು-ಜಲ ಈ ಕ್ರಮದಲ್ಲಿರುತ್ತದೆ. ಅಂದರೆ ಕಾಷ್ಠದಿಂದ ಅಗ್ನಿ ಉತ್ಪತ್ತಿಯಾಗುತ್ತದೆ. ಕಟ್ಟಿಗೆ ಸುಟ್ಟಾಗ ಬೆಂಕಿ ಬರುತ್ತದೆ ಎಂಬುದು ಉದಾಹರಣೆಯ ಅದೇ ರೀತಿ ಅಗ್ನಿಯು ಪೃಥ್ವಿಯ ಸೃಷ್ಟಿಗೆ ಕಾರಣವಾಗುತ್ತದೆ. ಅಂದರೆ ಅಗ್ನಿಯು ಉರಿದು ಬೂದಿ (ಪೃಥ್ವಿ) ನಿರ್ಮಾಣವಾಗುತ್ತದೆ.

ಈ ಪೃಥ್ವಿಯಿಂದ ಧಾತು ಉದ್ಭವವಾಗುತ್ತದೆ. ಅಂದರೆ ಭೂಮಿಯ ಗರ್ಭದಿಂದ ಗಣಿಗಾರಿಕೆ ನಡೆಸಿ ಖನಿಜವನ್ನು ಎಳೆಯುತ್ತಾರೆ. ಈ ಧಾತುವು ಕರಗಿದಾಗ ಜಲೋತ್ಪನ್ನವಾಗುತ್ತದೆ. ಅಂದರೆ ಜಲದಂತೆ ದ್ರವ ಸ್ಥಿತಿಗೆ ಧಾತು ತಿರುಗುತ್ತದೆ. ಈ ಜಲದಿಂದಾಗಿಯೇ ಕಾಷ್ಠವು ಅಂದರೆ ಗಿಡ ಮರಗಳು, ಸಸ್ಯಗಳು ಬೆಳೆಯುತ್ತವೆ.
ಈ ಮೂಲ ತತ್ವಗಳ ಚಕ್ರ ಅರ್ಥ ಮಾಡಿಕೊಂಡರೆ ಸುಲಭವಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ವಾಸ್ತು ಲೇಖನಗಳು

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ...

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ...

ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ...

ಆರ್ಥಿಕ ವೃದ್ಧಿಗೆ ವಾಸ್ತು ಟಿಪ್ಸ್

ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ...