ಫೆಂಗ್‌ಶುಯಿ ಪ್ರಕಾರ ಚಿತ್ರಗಳ ಪಾತ್ರ

ಶುಕ್ರವಾರ, 23 ನವೆಂಬರ್ 2007 (15:34 IST)

ರಶ್ಮಿ ಪೈ

ಫೆಂಗ್‌ಶುಯಿ ಶಾಸ್ತ್ರದ ಮನೆಯೊಳಗೆ ನಾವಿರಿಸುವಂತಹ ಚಿತ್ರಗಳು ಅಥವಾ ವರ್ಣಚಿತ್ರಗಳು ಅಲ್ಲಿ ವಾಸಿಸುವವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸಿಗೆ ಮುದ ನೀಡುವಂತಹ ಚಿತ್ರಗಳನ್ನು ಭಿತ್ತಿಯಲ್ಲಿ ತೂಗುಹಾಕುವುದರಿಂದ ಮನೆಯೊಳಗೆ ಧನಾತ್ಮಕ ಚೈತನ್ಯವು ಮೂಡಿ ಬರುವುದು ಎಂದು ಶಾಸ್ತ್ರವು ಹೇಳುತ್ತದೆ. ಮಲಗುವ ಕೋಣೆಯಲ್ಲಿ ಉತ್ತಮವಾದ ಚಿತ್ರಗಳು ಅಂದರೆ ನಗುವ ಮಗು, ಹೂವಿನ ಚಿತ್ರಗಳನ್ನಿರಿಸುವುದರಿಂದ ಮನಸ್ಸಿಗೆ ಹಿತಕರವಾಗಿದ್ದು ಚೆನ್ನಾಗಿ ನಿದ್ದೆಮಾಡಲು ಸಹಕಾರಿಯಾಗಿದೆ. ಫೆಂಗ್‌ಶುಯಿ ಪ್ರಕಾರ ಕೋಣೆಯೊಳಗಿರುವ ಚಿತ್ರಗಳು ನಮ್ಮ ಜೀವನದ ಮೇಲೆ ಪ್ರಮುಖ ಪರಿಣಾಮವನ್ನು ಬೀರುತ್ತವೆ. ಅಂತಹ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.
.ಈಜುವ ಮೀನಿನ ಚಿತ್ರವು ದೀರ್ಘಕಾಲ ಬಾಳ್ವಿಕೆಯನ್ನು ಪ್ರತಿಬಿಂಬಿಸುತ್ತದೆ.
.
ಕುರಿಮರಿಗಳ ಚಿತ್ರವು ಭಾಗ್ಯದ ಪ್ರತೀಕ.

.ಸೂರ್ಯೋದಯ, ಪರ್ವತಗಳ ಚಿತ್ರಗಳು ಶುಭ ನಿರೀಕ್ಷೆಯನ್ನು ಸೂಚಿಸುತ್ತವೆ.

.ಜಲಪಾತದ ಚಿತ್ರವು ಶುಭದಾಯಕ.

.ನಗುಮುಖದ ವ್ಯಕ್ತಿಗಳ ಪೊಟ್ರೇಟ್‌ಗಳು ಧನಾತ್ಮಕ ಅನುಭವಗಳನ್ನು ಮೈಗೂಡಿಸಲು ಸಹಾಯಕವಾಗುತ್ತದೆ.

.ಕಡು ಬಣ್ಣದ ಅಥವಾ ದಟ್ಟವಾದ ಬಣ್ಣದ ಚಿತ್ರಗಳು ಅನಾರೋಗ್ಯವನ್ನುಂಟುಮಾಡುತ್ತವೆ.

.ರೇಖಾಗಣಿತದ ಆಕೃತಿಗಳನ್ನು ಹೋಲುವ ವರ್ಣ ಚಿತ್ರಗಳು ಮನಸ್ಸಿನ ಮೇಲೆ ಹಾನಿಕರವಾದ ಪರಿಣಾಮಗಳನ್ನು ಬೀರುವುದು.

.ಕಡು ಕೆಂಪು ಬಣ್ಣವನ್ನು ಅತಿಯಾಗಿ ಬಳಸಿದ ವರ್ಣಚಿತ್ರಗಳು ಗೊಂದಲವನ್ನು ಸೃಷ್ಟಿಸುವ ಸಾಧ್ಯತೆಗಳಿರುತ್ತವೆ.

.ಕ್ರೂರ ಮೃಗಗಳ ಅಥವಾ ಭಯಾನಕ ಚಿತ್ರಗಳು ಆರೋಗ್ಯವನ್ನು ಕೆಡಿಸುತ್ತದೆ.

ಹೀಗೆ ಸೂಕ್ತವಾದ ಚಿತ್ರಗಳನ್ನು ಕೋಣೆಯೊಳಗಿರಿವುದರಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ದೊರಕುವುದು.ಇದರಲ್ಲಿ ಇನ್ನಷ್ಟು ಓದಿ :  

ವಾಸ್ತು ಲೇಖನಗಳು

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ...

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ...

ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ...

ಆರ್ಥಿಕ ವೃದ್ಧಿಗೆ ವಾಸ್ತು ಟಿಪ್ಸ್

ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ...