ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ನಾವು ವಾಸಿಸುವ ಮನೆಯು ಪರಿಣಾಮ ಬೀರುತ್ತದೆಂದರೆ ನಂಬಲು ಸಾಧ್ಯವಿಲ್ಲವೇ? ನಾವು ಕಟ್ಟಿಸಿದ ಮನೆಯಲ್ಲಿ ವಾಸ್ತುದೋಷವಿದ್ದರೆ ಒಂದು ಕೋಣೆಯಲ್ಲಿ ಬದಲಾವಣೆ ಮಾಡುವ ಮೂಲಕ ಮನೆ ಸಮೃದ್ಧಿ ಹೊಂದುತ್ತದೆಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. ವಾಸ್ತುಶಾಸ್ತ್ರದ ರೀತ್ಯ ಮನೆಗೆ ಎಲ್ಲ ರೀತಿಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆಗಲೇ ವಾಸ್ತುಶಾಸ್ತ್ರದ ಫಲವನ್ನು ನಾವು ಪೂರ್ಣ ಪ್ರಮಾಣದಲ್ಲಿ ಅನುಭವಿಸುತ್ತೇವೆ.