ಈ ಕಾರಣಕ್ಕೆ ಮದುವೆಯಾಗಲು ಅರ್ಜೆಂಟ್ ಮಾಡಬೇಡಿ!

ಬೆಂಗಳೂರು, ಗುರುವಾರ, 8 ನವೆಂಬರ್ 2018 (07:54 IST)


ಬೆಂಗಳೂರು: ಓರಗೆಯವರಿಗೆಲ್ಲಾ ಮದುವೆಯಾಯಿತು. ನಿಮ್ಮದು ಯಾವಾಗ? ಹೀಗಂತ ಎಲ್ಲರೂ ಕೇಳುತ್ತಿದ್ದರಾರೆಂದು ಗಡಿಬಿಡಿಯಲ್ಲಿ ಮದುವೆಯಾಗಲು ಒಪ್ಪಿಕೊಳ್ಳಬೇಡಿ. ಅದರಲ್ಲೂ ಕೆಳಗೆ ಹೇಳಿದ ಕಾರಣಗಳಿಗಂತೂ ಮದುವೆಯಾಗಲು ಒಪ್ಪಬೇಡಿ.
 
ಶ್ರೀಮಂತಿಕೆ
ಮದುವೆಯಾಗುವ ವರ ಅಥವಾ ವಧುವಿನ ಕುಟುಂಬದವರು ಶ್ರೀಮಂತರು ಎಂಬ ಕಾರಣಕ್ಕೆ ಮದುವೆಯಾಗಬೇಡಿ. ಶ್ರೀಮಂತಿಕೆ ಇದ್ದರೆ ಒಳ್ಳೆಯದೇ. ಆದರೆ ಅದುವೇ ಜೀವನ ಸಂಗಾತಿ ಇರಬೇಕಾದ ಮಾನದಂಡವಲ್ಲ.
 
ಸ್ನೇಹಿತರದ್ದಾಯ್ತು, ನಿಂದು ಯಾವಾಗ?
ಮದುವೆ ವಯಸ್ಸಿಗೆ ಬಂದ ಮೇಲೆ ಸ್ನೇಹಿತರು ಮದುವೆಯಾಯಿತೆಂದು ನೀವೂ ಮದುವೆಯಾಗಲು ಅರ್ಜೆಂಟ್ ಮಾಡಬೇಡಿ. ಅವರ ಮನಸ್ಥಿತಿಯಂತೇ ನಿಮ್ಮದೂ ಇರಬೇಕೆಂದಿಲ್ಲ. ನಿಮ್ಮ ಮನಸ್ಸಿಗೆ ನಿಜವಾಗಿಯೂ ಮದುವೆಯಾಗಬೇಕೆಂದು ಅನಿಸಿದರೆ ಮಾತ್ರ ಸಿದ್ಧರಾಗಿ.
 
ಪೋಷಕರ ಒತ್ತಾಯ
ವಯಸ್ಸಾಯ್ತು, ಇನ್ನಾದರೂ ಮದುವೆ ಆಗು ಎಂಬ ಪೋಷಕರ ಒತ್ತಾಯಕ್ಕೆ ಅವರಿಗೆ ಇಷ್ಟವಾದ ಹುಡುಗ/ಹುಡುಗಿಗೆ ಕೊರಳೊಡ್ಡಬೇಡಿ. ಪೋಷಕರ ಜತೆಗೆ ನಿಮ್ಮ ಸಂಗಾತಿ ನಿಮಗೂ ಇಷ್ಟವಾಗಬೇಕು. ಯಾಕೆಂದರೆ ಜತೆಯಾಗಿ ಎಲ್ಲವನ್ನೂ ಹಂಚಿಕೊಂಡು ಜೀವನ ನಡೆಸಬೇಕಾದವರು ನೀವೇ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ರೋಮ್ಯಾನ್ಸ್

news

ಮದುವೆಯಾದ ಹೊಸತರಲ್ಲಿ ಹೀಗೆಲ್ಲಾ ಆಗೋದು ಸಹಜ!

ಬೆಂಗಳೂರು: ಮದುವೆಯಾದ ಮೊದಲ ಎರಡು ತಿಂಗಳು ದಂಪತಿಗಳಿಗೆ ಮಹತ್ವದ ಸಮಯ. ಈ ಸಮಯದಲ್ಲಿ ಹೇಗೆ ಅಡ್ಜೆಸ್ಟ್ ...

news

ಪತ್ನಿ ಸಿಡಿ ಸಿಡಿ ಅಂತಿರ್ತಾಳಾ? ಹಾಗಿದ್ರೆ ಹೀಗೆ ಮಾಡಿ

ಬೆಂಗಳೂರು: ಮನೆಗೆ ಹೋದರೆ ಸಾಕು ಪತ್ನಿಯ ಕಿರಿ ಕಿರಿ ಅನ್ನುವವರು ಈ ಸುದ್ದಿ ಓದಲೇಬೇಕು. ಸದಾ ...

news

ಲೈಂಗಿಕಾಸಕ್ತಿ ಹೆಚ್ಚಬೇಕಾದರೆ ಈ ಅಭ್ಯಾಸಗಳನ್ನು ಬಿಡಿ

ಬೆಂಗಳೂರು: ಲೈಂಗಿಕಾಸಕ್ತಿ ಕುಂದಿದೆ ಎಂಬ ಚಿಂತೆಯೇ? ಹಾಗಿದ್ದರೆ ನಿಮ್ಮ ದೈನಂದಿನ ಜೀವನದಲ್ಲಿ ಮಾಡುವ ಈ ...

news

ಗಂಡ-ಹೆಂಡತಿ ನಡುವೆ ಎಷ್ಟು ವರ್ಷ ಗ್ಯಾಪ್ ಇದ್ದರೆ ಡಿವೋರ್ಸ್ ಆಗಲ್ಲ ಗೊತ್ತಾ?!

ಬೆಂಗಳೂರು: ಮದುವೆಯಾಗುವ ಮೊದಲು ತಮ್ಮ ಸಂಗಾತಿಗೂ ತಮಗೂ ಎಷ್ಟು ವರ್ಷ ವಯಸ್ಸಿನ ಅಂತರವಿರಬೇಕು ಎಂಬ ಕನ್ ...