ಬೆಂಗಳೂರು: ನಾನೇನು ಮಾಡ್ಲಿ ಸ್ವಾಮಿ ನನ್ನ ಹುಡುಗಿ ನಾಯಿ ಪ್ರೇಮಿ ಎಂಬ ಹಾಡೊಂದು ಭಾರೀ ಹಿಟ್ ಆಗಿತ್ತು. ಆದರೆ ನಿಜ ಜೀವನದಲ್ಲೂ ಈ ರೀತಿ ನಾಯಿ ಪ್ರೇಮಿಗಳನ್ನು ಮದುವೆಯಾದರೆ ಖುಷಿಯಾಗಿರುತ್ತೇವಾ? ತಜ್ಞರು ಏನು ಹೇಳುತ್ತಾರೆ ಗೊತ್ತಾ?ತಜ್ಞರ ಪ್ರಕಾರ ನಾಯಿ ಪ್ರೇಮಿಗಳನ್ನು ಮದುವೆಯಾದರೆ ಒಳ್ಳೆಯದು. ಯಾಕೆಂದರೆ ನಾಯಿಯಂತಹಾ ಸಾಕು ಪ್ರಾಣಿಗಳನ್ನು ನೋಡಿಕೊಳ್ಳುವ ವ್ಯಕ್ತಿಗೆ ಸಹಜವಾಗಿಯೇ ತ್ಯಾಗದ ಭಾವನೆ, ಒಬ್ಬರನ್ನು ಎಚ್ಚರಿಕೆಯಿಂದ, ಪ್ರೀತಿಯಿಂದ ನೋಡಿಕೊಳ್ಳುವ ಅನುಭವವಿರುತ್ತದೆ. ಅಂತಹ ವ್ಯಕ್ತಿಗಳಿಗೆ ಫಲಾಪೇಕ್ಷೆಯಿಲ್ಲದೇ ಪ್ರೀತಿಸುವುದು ಹೇಗೆಂದು