ಪ್ರತಿ ವರ್ಷದ ಫೆಬ್ರವರಿ ತಿಂಗಳನ್ನು ಪ್ರೇಮಿಗಳಿಗಾಗಿಯೇ ಮೀಸಲಿಡಲಾಗಿದೆ. ಜಾತಿ, ಮತ, ಧರ್ಮಗಳ ಬೇಧವಿಲ್ಲದೇ ಪ್ರೇಮಿಗಳು ಆಚರಿಸುವ ಹಬ್ಬ ಇದಾಗಿದೆ. ಫೆಬ್ರವರಿ 7 ರಿಂದಲೇ ರೋಸ್ ಡೇ ಎಂದು ಆರಂಭವಾಗುವ ಈ ವ್ಯಾಲಂಟೈನ್ಸ್ ಡೇ ಫೆಬ್ರವರಿ 14 ರಂದು ಮುಗಿಯುತ್ತದೆ. ಯುವಕ ಯುವತಿಯರು ಈ ದಿನಕ್ಕಾಗೇ ಕಾದು ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುತ್ತಾರೆ ಮತ್ತು ತಮ್ಮ ಹುಡುಗ ಅಥವಾ ಹುಡುಗಿಗೆ ಇಷ್ಟವಾಗುವ ಉಡುಗೊರೆಗಳನ್ನು ಕೊಟ್ಟು ಜೊತೆಯಲ್ಲಿ ಸಮಯವನ್ನು ಕಳೆಯುತ್ತಾರೆ.