ಉಡುಪಿ: ಎಲ್ಲಿರುವೆ ಮನವ ಕಾಡುವ ರೂಪಸಿಯೇ…ಬಯಕೆಯ ಬಳ್ಳಿಯ ನಗುವ ಹೂವಾದ ಪ್ರೇಯಸಿಯೇ ... ಬಯಲುದಾರಿ ಸಿನಿಮಾನದ ಈ ಹಾಡು ಪ್ರತಿ ಪ್ರೇಮಿಗಳ ದಿನಕ್ಕೂ ಮೊದಲೆ ನನಗಾಗಿಯೇ ಸಿದ್ಧಗೊಂಡಿರಬಹುದ ಎಂದು ಎಣಿಸುವುದು ನನಗೆ ಮಾತ್ರಾನಾ ? ಅದೆಷ್ಟೋ ವರುಷಗಳು ಸಂದವು ನನ್ನವಳ ಬರುವಿಕೆಗಾಗಿ ಕಾದು!! ಇಂದಲ್ಲ ನಾಳೆ ಬಂದೆ ಬರುವಳು ಎನ್ನುವ ಆ ಹೊಂಗನಸಿನ ಗೋಪುರ ಇಂದು ಕೂಡ ಕಳೆಗಟ್ಟಿ ನಿಂತಿದೆ. ಗೆಳತಿ ಎಲ್ಲಿರುವೆ... ಈ ಒಡಲಾಳದಲ್ಲಿ ನಿನಗೆಂದೆ ಅದೆಷ್ಟೋ ಅಕ್ಕರೆಯನ್ನು