ಹುಡುಗಿಯರನ್ನು ಒಲಿಸಿಕೊಳ್ಳಲು ರಿಸ್ಕ್‌ಗೆ ಸಿದ್ಧ

ND
ತಮ್ಮ ಧೈರ್ಯ, ಸಾಹಸ, ಕೆಚ್ಚೆದೆ, ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆ ಪ್ರದರ್ಶಿಸಲು ಪುರುಷರು ಯಾವ ಮಟ್ಟಕ್ಕೂ ಇಳಿಯಲು ಅಥವಾ ಏರಲು ಸಿದ್ಧರಾಗಿರುತ್ತಾರೆ ಎಂಬುದು ಹೆಚ್ಚಿನ ಮಹಿಳೆಯರಿಗೆ ಗೊತ್ತಿರುವ ವಿಷಯವೇ. ಇದನ್ನು ಫ್ಲೋರಿಡಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ತಮ್ಮ ಸಂಶೋಧನೆಯ ಮೂಲಕ ದೃಢಪಡಿಸಿದ್ದಾರೆ.

ಬಹುಶಃ ಇದೇ ಕಾರಣಕ್ಕೆ ವಿಶ್ವದ ಸ್ಕೈಡೈವರ್‌ಗಳಲ್ಲಿ ಐದನೇ ನಾಲ್ಕಂಶವೂ ಪುರುಷರೇ ಹಾಗೂ ರಾಕ್ ಕ್ಲೈಂಬರ್‌ಗಳಲ್ಲಿ ಮೂರನೇ ಎರಡಂಶವೂ ಪುರುಷರೇ ಇರುವುದು.

ಸಂಗಾತಿಯ ಆಯ್ಕೆಯಲ್ಲಿ ಪುರುಷರಿಗಿಂತಲೂ ಮಹಿಳೆಯರು ಹೆಚ್ಚು 'ಚೂಸಿ' ಆಗಿರುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಹಾಗಂತ, ಹುಡುಗರ ಜೀವನವನ್ನು ಹುಡುಗಿಯರು ಮತ್ತಷ್ಟು ಕಠಿಣಗೊಳಿಸುತ್ತಾರೆ ಎಂಬುದು ಇದರರ್ಥವಿರಲಾರದು. ಇದಕ್ಕೆ ಪ್ರಮುಖ ಕಾರಣವೆಂದರೆ (ಇದಕ್ಕೆ ಇತಿಹಾಸಗಳ ಪುರಾವೆಯೂ ಇದೆ), ತಮ್ಮನ್ನು, ತಮ್ಮ ಮಕ್ಕಳನ್ನು ಚೆನ್ನಾಗಿ ಸಾಕುವಂತಹ ಪುರುಷರು ತನಗೆ ಬೇಕೆಂದು ಪ್ರತಿಯೊಬ್ಬ ಹೆಣ್ಣೂ ಬಯಸುತ್ತಾಳೆ. ಈ ಒತ್ತಡವಿದೆಯಲ್ಲ, ಅದುವೇ ಪುರುಷರನ್ನು ಕಠಿಣ ಪರಿಶ್ರಮ ವಹಿಸುವಂತೆ ಮಾಡುತ್ತದೆ ಮತ್ತು ತಮ್ಮ ಸಾಮರ್ಥ್ಯ ಸಾಬೀತುಪಡಿಸುವಲ್ಲಿನ ತುಡಿತ ಹೆಚ್ಚಾಗಿಸುವಂತೆ ಮಾಡುತ್ತದೆ.

ಹೀಗಾಗಿ, ಫ್ಲೋರಿಡಾ ವಿವಿಯ ಸಾಮಾಜಿಕ ಮನಃಶಾಸ್ತ್ರಜ್ಞರು ಒಂದು ಪ್ರಶ್ನೆಗೆ ಉತ್ತರ ಕಂಡುಹುಡುಕಲು ನಿರ್ಧರಿಸಿದರು. ಅದೆಂದರೆ: ತಮ್ಮ ಭಾವೀ ಲವ್ವರ್‌ಗಳ ಗಮನ ಸೆಳೆಯುವ ನಿಟ್ಟಿನಲ್ಲಿ, ಧೈರ್ಯ, ಸಾಹಸದೊಂದಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಪುರುಷರು ಆಡುವ ಆಟಗಳಲ್ಲಿ ಅಪಾಯ ತಂದೊಡ್ಡಿಕೊಳ್ಳುವುದೂ ಒಂದಾಗಿದೆಯೇ?

ಇದಕ್ಕಾಗಿ 134 ಸೈಕಾಲಜಿ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಅವರು ತಮ್ಮ ಸಂಶೋಧನೆಗೆ ಆಯ್ದುಕೊಂಡರು. ತಾವು 'ಒಳ್ಳೆಯ ಮೂಡ್'ನಲ್ಲಿ ಇದ್ದರೆ ಮತ್ತು ಆಕರ್ಷಿಸಲು ತಮ್ಮ ಸುತ್ತಮುತ್ತ ಸುಂದರ ತರುಣಿಯರಿದ್ದಾರೆ ಎಂಬುದು ಮನವರಿಕೆಯಾದರೆ ಪುರುಷರು ಹೆಚ್ಚು ರಿಸ್ಕ್ ತೆಗೆದುಕೊಳ್ಳುತ್ತಾರೆಯೇ ಎಂಬುದನ್ನು ಕಂಡುಹುಡುಕುವುದು ವಿಜ್ಞಾನಿಗಳ ಉದ್ದೇಶವಾಗಿತ್ತು.

ಪ್ರ.ಯೋಗದ ಸಂದರ್ಭದಲ್ಲಿ ತಜ್ಞರು ಹುಡುಗರಿಗೆ 10 ಅತ್ಯಾಕರ್ಷಕ ಮತ್ತು 10 ಮಂದಿ ಆಕರ್ಷಕವಲ್ಲದಿರುವ ಹುಡುಗ-ಹುಡುಗಿಯರ ಫೋಟೋಗಳನ್ನು ತೋರಿಸಿದರು. ಅಂದರೆ ಹುಡುಗಿಯರಿಗೆ ಹುಡುಗರ ಫೋಟೋ, ಹುಡುಗರಿಗೆ ಹುಡುಗಿಯರ ಫೋಟೋ. ಈ ರೀತಿ ರಿಸ್ಕ್ ತೆಗೆದುಕೊಳ್ಳುವ ಆಟವೊಂದನ್ನು ಇದಕ್ಕೆ ಮಿಳಿತಗೊಳಿಸಿ, ಸಂಶೋಧಕರು ಪತ್ತೆ ಹಚ್ಚಿದ್ದೇನೆಂದರೆ, ಹುಡುಗರು ಹುಡುಗಿಯರನ್ನು ಒಲಿಸಿಕೊಳ್ಳಲು ರಿಸ್ಕ್ ತೆಗೆದುಕೊಳ್ಳಲು ರೆಡಿ ಇರುತ್ತಾರೆ ಅಂತ. ಅದರ ಪ್ರಕಾರ, ಪುರುಷರು ಲೈಂಗಿಕವಾಗಿ ಪ್ರಚೋದನೆಗೊಂಡಿದ್ದರೆ ಮತ್ತು ಆಕರ್ಷಕ ಸುಂದರ ಯುವತಿಯರು ಎದುರಿಗಿದ್ದರೆ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಸಾಹಸಮಯ ಹೆಜ್ಜೆಗೆ ಮುಂದಾಗುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಲಾಯಿತು.

ಆದರೆ, ಮಹಿಳಾ ವಿದ್ಯಾರ್ಥಿಗಳಲ್ಲಿ ಇದು ತದ್ವಿರುದ್ಧ ಫಲಿತಾಂಶ ನೀಡಿತು. ಅಂದರೆ, ವಿದ್ಯಾರ್ಥಿನಿಯರು ತಾವು ಭಾವಿಸಿದ, ಯೋಚಿಸಿದ ಅಥವಾ ನೆನಪಿಸಿಕೊಂಡ ವಿಷಯಗಳಿಂದ ಯಾವುದೇ ರೀತಿಯಲ್ಲಿಯೂ ಪ್ರಭಾವಿತರಾಗಿರಲಿಲ್ಲ. ಒಟ್ಟಿನಲ್ಲಿ, ತಮ್ಮ ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆಯನ್ನು ತೋರಿಸಲು ಪುರುಷರು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದಾರೆ ಎಂಬುದು ಶ್ರುತಪಟ್ಟಿತು.ಇದರಲ್ಲಿ ಇನ್ನಷ್ಟು ಓದಿ :