ಬೇಸಿಗೆಯಲ್ಲಿ ತಾಟಿನುಂಗು ತಿನ್ನುತ್ತಿದ್ದೀರಾ? ಬಹಳಷ್ಟು ಪ್ರಯೋಜನಗಳಿವೆ ತಿಳಿದಿದೆಯೆ?

ಬೆಂಗಳೂರು, ಶುಕ್ರವಾರ, 15 ಮಾರ್ಚ್ 2019 (16:07 IST)

ಬೇಸಿಗೆಯಲ್ಲಿ ಮಾತ್ರ ಲಭ್ಯವಿರುವ ತಾಟಿನುಂಗುವಿನಲ್ಲಿ ಅನೇಕ ಪ್ರಯೋಜನಗಳು ಇವೆಯೆಂದು ನಿಮಗೆ ತಿಳಿದಿದೆಯೆ? ಆರು ಬಾಳೆಹಣ್ಣಿನಲ್ಲಿರುವ ಪೋಟಾಷಿಯಂ ಒಂದು ತಾಟಿನುಂಗುನಲ್ಲಿ ಇರುತ್ತದೆಂದರೆ ನಂಬುತ್ತೀರಾ? ಹೌದ್ರಿ... ಇದನ್ನು ಐಸ್ ಆಪಲ್ ಅಂತಲೂ ಕರೆಯುತ್ತಾರೆ. ಪ್ರಕೃತಿಯ ಕೊಡುಗೆಯಾದ ತಾಟಿನುಂಗು.
ಈ ತಾಟಿನುಂಗುನಲ್ಲಿ ಅದ್ಭುತ ಔಷಧ ಗುಣಗಳು ಇರುವುದರಿಂದ ಸಾಧ್ಯವಾದರೆ ಇದನ್ನು ಪ್ರತಿದಿನ ಸೇವಿಸಲು ಪ್ರಯತ್ನಿಸಿ. 
ತಾಟಿನುಂಗುವಿನ ಪ್ರಯೋಜನಗಳೇನೆಂದು ನೋಡೋಣ.
 
ತಾಟಿ ನುಂಗು ಶರೀರದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆಮಾಡುತ್ತದೆ.
ತಾಟಿನುಂಗುವಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳಿಗೆ ಬಲವನ್ನು ನೀಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದರಲ್ಲಿರುವ ಎ,ಬಿ,ಸಿ ವಿಟಮಿನ್‌ಗಳು, ಐರನ್, ಜಿಂಕ್, ಫಾಸ್ಪರಸ್, ಪೋಟಾಷಿಯಂ ನಂತಹ ಪೋಷಕಾಂಶಗಳು ಆರೋಗ್ಯವನ್ನು ವೃದ್ಧಿಸುತ್ತದೆ.
ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ಮಧುಮೇಹ ರೋಗಿಗಳಿಗೆ ಒಳ್ಳೆಯದು.
ಯಕೃತ್ತಿನ ಸಮಸ್ಯೆಯಿಂದ ಹೋರಾಡುತ್ತಿರುವರು ಇದನ್ನು ಸೇವಿಸಿದರೆ ಉತ್ತಮ.
ಮೊಡವೆಗಳಿದ್ದರೆ, ತಾಟಿನುಂಗು ಪ್ರತಿದಿನ ಸೇವಿಸಿದರೆ ಕಡಿಮೆಯಾಗುತ್ತದೆ
ಬೇಸಿಗೆಯಲ್ಲಿ ದೇಹದಲ್ಲಿನ ಗ್ಲೂಕೋಸ್ ಅಂಶದ ಏರುಪೇರುಗಳನ್ನು ನಿಯಂತ್ರಿಸುತ್ತದೆ.
ತಾಟಿನುಂಗುವಿನಲ್ಲಿರುವ ಪೋಟಾಷಿಯಂ ದೇಹದಲ್ಲಿರುವ ವಿಷಪದಾರ್ಥಗಳನ್ನು ತೊಲಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.
ಉರಿಬಿಸಿಲಿನ ಕಾರಣದಿಂದ ದೇಹದಲ್ಲಿ ಡಿಹೈಡ್ರೇಶನ್ ಉಂಟಾದರೆ, ಆ ಸಮಯದಲ್ಲಿ ತಾಟಿನುಂಗು ಸೇವಿಸಿದರೆ ಉಪಶಮನವಾಗುತ್ತದೆ.
ದೇಹದಲ್ಲಿ ಕ್ಯಾನ್ಸರ್ ಕಣಗಳನ್ನು ತಡೆಯಲು ತಾಟಿನುಂಗು ಸಹಾಯಕವಾಗಿದೆ. ಟ್ಯೂಮರ್, ಬ್ರೆಸ್ಟ್ ಕ್ಯಾನ್ಸರ್ ಕಣಗಳನ್ನು ವೃದ್ದಿಸುವ ಪೆಟ್ರೋ ಕೆಮಿಕಲ್ಸ್ ಆಂಥೋಸೈನಿನ್ ನಂತಹವುಗಳನ್ನು ನಾಶಮಾಡುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹುಣಸೆ ಚಿಗುರಿನ ಚಟ್ನಿಪುಡಿ

ಊಟದ ಸಮಯದಲ್ಲಿ ಉಪ್ಪಿಕಾಯಿ ಇರುವಂತೆಯೇ ಚಟ್ನಿಪುಡಿಗಳು ಇದ್ದರೆ ಚೆನ್ನ. ಬಗೆಬಗೆಯ ಚಟ್ನಿಪುಡಿಗಳು ಊಟದ ...

news

ತೊಗರಿಬೇಳೆ ನುಚ್ಚಿನುಂಡೆ

ನುಚ್ಚಿನುಂಡೆ ಹಬೆಯಲ್ಲಿ ಬೇಯಿಸಿ ಮಾಡುವ ಕರ್ನಾಟಕದ ಜನಪ್ರಿಯವಾದ ತಿಂಡಿಯಾಗಿದೆ.

news

ಸ್ವಾದಿಷ್ಠವಾದ ಹುರಿಗಾಳು

ಹೆಸರುಕಾಳು, ಕಡಲೆಕಾಳು, ಅಲಸಂದೆ ಕಾಳು ಮತ್ತು ಹುರುಳಿ ಕಾಳನ್ನು ತೊಳೆದು -7-8 ಗಂಟೆಗಳ ಕಾಲ ನೆನಸಿಡಿ. ...

news

ರುಚಿಕರವಾದ ಬೇಸಿನ ಲಾಡನ್ನು ತಯಾರಿಸುವ ಬಗೆ ಹೇಗೆ?

ಮೊದಲು ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ ಅದರಲ್ಲಿ ಗೋಡಂಬಿಯನ್ನು ಹುರಿದು ...