ಮುಟ್ಟಿನ ಸಮಯದಲ್ಲಿ 30 ನಿಮಿಷಗಳ ಕಾಲ ವರ್ಕೌಟ್ ಮಾಡಬೇಕು. ಈ ರೀತಿ ಮಾಡುವುದರಿಂದ ಶಾರೀರಿಕ ನೋವಿನಿಂದ ಮುಕ್ತಿ ಸಿಗುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಇದು ಯಾವುದೇ ದೈಹಿಕ ಹಾನಿಯನ್ನುಂಟು ಮಾಡುವುದಿಲ್ಲ. ಮುಟ್ಟಿನ ಸಮಯದಲ್ಲಿ ಬೆನ್ನುನೋವಿನಿಂದ ನೀವು ತೊಂದರೆಗೊಳಗಾಗಿದ್ದರೆ, ರನ್ನಿಂಗ್ ಹಾಗೂ ವಾಕಿಂಗ್ ನಿಮಗೆ ನೋವಿನಿಂದ ಪರಿಹಾರವನ್ನು ನೀಡುತ್ತದೆ. ಮುಟ್ಟಿನ ದಿನಗಳು ಮಹಿಳೆಯರಿಗೆ ನೋವುಂಟುಮಾಡುತ್ತವೆ. ಹೀಗಾಗಿ ಮಹಿಳೆಯರು ಮುಟ್ಟಾದ ಮೊದಲ ಎರಡು ದಿನ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ದಿನಗಳಲ್ಲಿ, ಮಹಿಳೆಯರಿಗೆ