ಶ್ರಾವಣ ಮಾಸದ ಪೂರ್ಣಿಮೆ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿ ವ್ರತ.ವರಮಹಾಲಕ್ಷ್ಮೀ ವ್ರತವನ್ನು ಆಚರಿಸುವವರು ಹನ್ನೆರಡು ತಂತುಗಳಿಂದ ಮಾಡಿದ ಹನ್ನೆರಡು ಗಂಟುಗಳಿಂದ ಕೂಡಿದ, ಲಕ್ಷ್ಮೀದಾರವನ್ನು ಬಲಹಸ್ತಕ್ಕೆ ಕಟ್ಟಿಕೊಂಡು, ಶ್ರದ್ಧಾಭಕ್ತಿಗಳಿಂದ ಪೂಜಿಸಬೇಕು. ವರಲಕ್ಷ್ಮಿ ಮಂತ್ರ ‘ಪದ್ಮಾಸನೇ ಪದ್ಮಾಕರೇ ಸರ್ವ ಲೌಕೈಕ ಪೂಜಿತೇ| ನಾರಾಯಣಾಪ್ರಿಯೇ ದೇಯಿ ಸುಪ್ರಿತಾ ಭವ ಸರ್ವದಾ|| ಹನ್ನೆರಡು ಎಂಬುದು ವಾಸುದೇವನಿಗೆ ಪ್ರಿಯವಾದ ಒಂದು ಶಕ್ತಿಪೂರ್ಣವಾದ ರಹಸ್ಯ ಸಂಖ್ಯೆ. ದ್ವಾದಶಾತ್ಮಕನಾದ ಭಗವಂತನ ಪರಾಶಕ್ತಿಯಾಗಿ ಆತನೊಡನೆ ಸದಾ ಸರ್ವತ್ರಯೋಗವನ್ನು ಹೊಂದಿರುವ ಶ್ರೀ