ಇಂದು ಗಂಡ ಮನೆಯಲ್ಲಿಲ್ಲ… ಬೆಳಗ್ಗೆ ಬೇಗ ಕಾಫಿ, ತಿಂಡಿ ರೆಡಿ ಮಾಡಬೇಕೆಂಬ ಗಡಿಬಿಡಿಯಿಲ್ಲ. ಕಸ ಗುಡಿಸಿಲ್ಲವೆಂದು ಕೇಳುವವರಿಲ್ಲ.. ಬಟ್ಟೆಗೆ ಇಸ್ತ್ರಿ ಮಾಡಿ ಕೊಡುವ ಗೌಜಿಯಿಲ್ಲ. ಇನಿಯನಿಲ್ಲದ ದಿನ ಇವಳು ಅನುಭವಿಸುವ ಖುಷಿಯ ದಿನವದು.. ಯಾವತ್ತಿನ ಹಾಗೇ ಅಲರಾಂ ಕೂಗಿದರೂ, ಏಳಲೇಬೇಕೆಂಬ ಒತ್ತಡವಿಲ್ಲ. ಗೇಟಿನ ಬುಡದಲ್ಲಿ ಬಿದ್ದ ಪೇಪರ್ ಎತ್ತಿಕೊಂಡು ಬರಲೇ ಬೇಕೆಂದೇನಿಲ್ಲ. ಇವಳಿಗೆ ಮತ್ತೆ ಓದಿದರೂ ನಡೆಯುತ್ತದೆ. ಪಕ್ಕದ ಮನೆ ಸೀತಮ್ಮನೋ.. ಸಾವಿತ್ರಮ್ಮನೋ ಸಿಕ್ಕರೆ ಒಂದಷ್ಟು ಹೊತ್ತು ಹರಟೆ ಹೊಡೆಯಬಹುದು.