ಬೆಂಗಳೂರು: ಅದೊಂದು ಕಾಲವಿತ್ತು..ಹೆಣ್ಣೆಂದರೆ ಹೀನಾಯವಾಗಿ ನೋಡುತ್ತಿದ್ದರು. ಹುಟ್ಟಿದ್ದು ಹೆಣ್ಣಾಗಿದ್ದರೆ ಮನಸೋ ಇಚ್ಛೆ ಜರಿಯುತ್ತಿದ್ದರು. ಯಾರದೋ ಮನೆ ಸೇರುವವಳು, ಖರ್ಚಿನ ಮೂಲ ಮತ್ತು ಜೋಪಾನ ಮಾಡಬೇಕಾಗಿದ್ದ ಅನಿವಾರ್ಯತೆ ಅಂತ! ಹೆಣ್ಣನ್ನು ದುರ್ಬಲವೆಂದು ಸಾಬೀತುಪಡಿಸಲೊಂದಷ್ಟು ಗಾದೆಮಾತುಗಳು ಹೆಣ್ಣೆಂದರೆ ಸೆರಗಲ್ಲಿಟ್ಟುಕೊಂಡ ಕೆಂಡ, ಕಳಚಿಕೊಳ್ಳದಿದ್ದರೆ ಸೀರೆಯನ್ನೇ ಸುಡುವಳು.. ಹೆಣ್ಣು ಹೆತ್ತವರು ತಗ್ಗಿ ಬಗ್ಗಿ ಇರಬೇಕು, ಇಂಥವೇ...