ಈ ಆಸನವು ಅರ್ಧ ಚಂದ್ರದ ಆಕೃತಿಯಲ್ಲಿರುವುದರಿಂದ ಇದಕ್ಕೆ ಅರ್ಧಚಂದ್ರಾಸನ ಎಂದು ಕರೆಯಲಾಗುತ್ತದೆ.ವಿಧಾನ:• ಮೊದಲಿಗೆ ತಾಡಾಸನದ ಭಂಗಿಯಲ್ಲಿ ನಿಲ್ಲಿರಿ. (ಹಿಮ್ಮಡಿ ಮತ್ತು ಹೆಬ್ಬೆರಳು ಒಂದಕ್ಕೊಂದು ತಾಗಿರುವಂತೆ ನಿಲ್ಲಿ, ಬೆನ್ನು ನೇರವಾಗಿರಲಿ ಮತ್ತು ಅಂಗೈಯನ್ನು ಒಳಮುಖವಾಗಿರಿಸಿ ನೇರವಾಗಿ ನಿಲ್ಲಿ.)• ಎರಡೂ ಕಾಲುಗಳನ್ನು ಪರಸ್ಪರ ದೂರ ಮಾಡಿ ವಿಶ್ರಾಮ ರೀತಿಯಲ್ಲಿ ನಿಲ್ಲಿ.• ನಿಧಾನವಾಗಿ ಉಸಿರೆಳೆದುಕೊಳ್ಳುತ್ತಾ, ಎಡಗೈಯನ್ನು ನೇರವಾಗಿ ಮೇಲಕ್ಕೆ ಎತ್ತಿ. ಇಡೀ ಶರೀರವನ್ನು ನೇರವಾಗಿ ಬಲ ಪಾರ್ಶ್ವಕ್ಕೆ ಬಾಗಿಸಿ. ಬಲಗೈಯನ್ನು ಭೂಮಿಗೆ ಲಂಬವಾಗಿ ಕೆಳಮುಖವಾಗಿ