ಸಂಸ್ಕೃತದಲ್ಲಿ ಧನುಸ್ಸು ಎಂದು ಬಿಲ್ಲು ಎಂಬರ್ಥ. ಧನುರಾಸನವು ನಿಮ್ಮ ದೇಹವನ್ನು ಬಿಲ್ಲಿನಂತೆ ಭಾಗಿಸುತ್ತದೆ. ನಿಮ್ಮ ನಡು ಮತ್ತು ತೊಡೆಗಳು ಬಾಗಿದ್ದರೆ, ಕಾಲಿನ ಕೆಳಭಾಗ ಮತ್ತು ಕೈಗಳು ನೆಟ್ಟಗಿನ ಬಿಲ್ಲುಹುರಿಯಂದಕ್ಕೆ ತಿರುಗುತ್ತದೆ.ಅರ್ಧಧನುರಾಸನದ ವಿಧಾನಗಳು ಮುಖಕೆಳಗಿರಿಸಿ ಕಿಬ್ಬೊಟ್ಟೆಯ ಮೇಲೆ ಮಲಗಿ. ನಿಮ್ಮ ಗಲ್ಲವು ನೆಲಕ್ಕೆ ತಾಕಿರಬೇಕು. ದೇಹದ ಇಕ್ಕೆಡೆಗಳಲ್ಲಿ ತೋಳುಗಳನ್ನಿರಿಸಿ. ಕಾಲುಗಳ ಮಧ್ಯೆ ಅಂತರವಿರಲಿ. ಹಿಂಬದಿಯ ಸ್ನಾಯುಗಳು ಸೇರಿದಂತೆ ಎಲ್ಲಾ ಸ್ನಾಯುಗಳು ವಿಶ್ರಾಂತಿ ಪಡೆಯಲಿ. ಸಹಜವಾಗಿ ಉಸಿರಾಡಿWD ನಿಮ್ಮ ಕಾಲುಗಳನ್ನು ಹಿಂದಕ್ಕೆ ಭಾಗಿಸಿ.