ಸಂಸ್ಕೃತದಲ್ಲಿ ಉಷ್ಟ್ರ ಅಂದರೆ ಒಂಟೆ ಎಂಬರ್ಥ. ಹಾಗಾಗಿ ಈ ಆಸನದ ಭಂಗಿಯನ್ನು ಒಂಟೆ ಭಂಗಿ ಎಂದೂ ಹೇಳಲಾಗುತ್ತದೆ. ಇದು ಭಾಗಿದ(ಧನುರಾಸನ) ಮತ್ತು ಮೇಲ್ಮುಖ ಭಾಗಿರುವ (ಊರ್ಧ್ವ ಧನುರಾಸನ) ನಡುವಿನ ಸ್ಥಿತ್ಯಂತರ ಭಂಗಿ.ಉಷ್ಟ್ರಾಸನ ಹಾಕುವ ವಿಧಾನ *ಮೊಣಕಾಲುಗಳನ್ನು ಹಿಂದಕ್ಕೆ ಬಗ್ಗಿಸಿ ಆರುಇಂಚುಗಳ ಅಂತರ ಇರುವಂತೆ ಇರಿಸಿ. ಪಾದಗಳನ್ನು ನಿತಂಬದಡಿಯಲ್ಲಿರಿ. ಕಾಲ್ಬೆರಳುಗಳು ಮತ್ತು ಅಂಗಾಲಿನ ತಿರುವಿನಲ್ಲಿ ಕುಳಿತುಕೊಳ್ಳಿ. ಪಾದಗಳನ್ನು ಸಾಧ್ಯವಾದಷ್ಟೂ ನಿತಂಬದ ಕೆಳಗಿರಿಸಿ. ದೇಹ, ಬೆನ್ನು ಮತ್ತು ಕತ್ತನ್ನು ನೇರವಾಗಿಸಿ ಮತ್ತು ಅಂಗೈಗಳನ್ನು