ನೌಕಾಸನ ಅಭ್ಯಾಸಿಸುವ ವೇಳೆ ದೇಹವು ದೋಣಿಯಾಕಾರಕ್ಕೆ ಪರಿವರ್ತನೆಯಾಗುವುದರಿಂದ ಇದಕ್ಕೆ ನೌಕಾಸನ ಎಂಬ ಹೆಸರು. ನೌಕಾ ಎಂದರೆ ಸಂಸ್ಕೃತದಲ್ಲಿ ದೋಣಿ ಎಂಬರ್ಥ. ಕೆಲವೇ ಬದಲಾವಣೆಗಳನ್ನು ಹೊರತು ಪಡಿಸಿದರೆ, ನೌಕಾಸನದ ತಂತ್ರಗಳು ಊರ್ಧ್ವ ಪಾದ ಹಸ್ತಾಸನದಂತೆಯೆ. ವಿಧಾನ ನೆಲದ ಮೇಲೆ ಅಂಗಾತ ಮಲಗಿ. ಊರ್ಧ್ವಪಾದ ಹಸ್ತಾಸನದಲ್ಲಿ ಇರಿಸುವಂತೆ ನೌಕಾಸನದಲ್ಲಿ ನೀವು ನಿಮ್ಮ ಕೈಗಳನ್ನು ತೊಡೆಗಳ ಮೇಲಿಡುವ ಅವಶ್ಯಕತೆ ಇಲ್ಲ. ಬದಲಿಗೆ WD ಹಸ್ತಗಳನ್ನು ತಲೆಯ ಮೇಲಕ್ಕೆ ಚಾಚಿ. ನಿಮ್ಮ ತೋಳುಗಳು ಕಿವಿಯನ್ನು ಸವರುತ್ತಿರಬೇಕು.