ಈ ಆಸನದಲ್ಲಿ ಕಾಲಬೆರಳು ಮತ್ತು ಕಾಲುಗಂಟುಗಳನ್ನು ಸ್ಪರ್ಷಿಸಲಾಗುತ್ತದೆ. ಈ ಆಸನದಲ್ಲಿ ಕೈಯನ್ನು ಕಾಲುಗಳ ಸಮೀಪಕ್ಕೆ ತರುವುದರಿಂದ ಇದಕ್ಕೆ ಪಾದಹಸ್ತಾಸನ ಎಂದು ಕರೆಯಲಾಗುತ್ತದೆ.ವಿಧಾನ: ಪ್ರಾರಂಭದಲ್ಲಿ, ಕಾಲನ್ನು ಹತ್ತಿರವಾಗಿಸಿ ನೇರವಾಗಿ ನಿಂತುಕೊಳ್ಳಿ. ಉಸಿರನ್ನು ಒಳತೆಗೆದುಕೊಂಡು, ಎರಡೂ ಕೈಗಳನ್ನು ಮೇಲಕ್ಕೆತ್ತಿ, ಕೈಗಳು ನೇರವಾಗಿದ್ದು, ಕಿವಿಗೆ ತಾಗುವಂತಿರಲಿ.ಉಸಿರನ್ನು ಹೊರತೆಗೆದು, ಸೊಂಟದಿಂದ ಕೆಳಗೆ ಬಾಗಿ, ನಿಮ್ಮ ಕೈಗಳಿಂದ ಕಾಲನ್ನು ಮುಟ್ಟಿರಿ. ಈ ಭಂಗಿಯಲ್ಲಿ ಕಾಲನ್ನು ನೇರವಾಗಿರಿಸಿ. ತಲೆಯನ್ನು ಮೊಣಗಂಟಿಗೆ ಸಮೀಪದವರೆಗೆ ಬಾಗಿಸಿ. ಇದೇ ಭಂಗಿಯಲ್ಲಿ ಸುಮಾರು 30-40