ಪದ್ಮಾಸನ, ಸುಖಾಸನ, ವಜ್ರಾಸನ ಮೊದಲಾದ ಯೋಗಕ್ಕೆ ಸಂಬಂಧಿಸಿದ ಯಾವುದೇ ಆಸನದಲ್ಲಿ ಕುಳಿತುಕೊಳ್ಳಿ. ಆರಾಮ ಸ್ಥಿತಿಯಲ್ಲಿ ಅಥವಾ ಕುರ್ಚಿಯಲ್ಲಿ ಕುಳಿತುಕೊಂಡೂ ಇದನ್ನು ಮಾಡಬಹುದು. ಅಂಗೈಗಳು ಕಟಿಭಾಗದಲ್ಲಿರಲಿ.ವಿಧಾನ ದೇಹ ಮತ್ತು ಭುಜ ಸ್ಥಿರವಾಗಿರಲಿ, ಕುತ್ತಿಗೆ ಮಾತ್ರವೇ ತಿರುಗಿಸುವ ಮೂಲಕ ಮುಖವನ್ನು ಬಲಕ್ಕೆ ತಿರುಗಿಸಿ. ಈ ಪ್ರಕ್ರಿಯೆಯಲ್ಲಿ ಗಲ್ಲವು ಬಲಭುಜಕ್ಕೆ ಸಾಧ್ಯವಿದ್ದಷ್ಟು ತಾಗುವಂತಿರಬೇಕು. ನಿಮ್ಮ ದೃಷ್ಟಿಯೂ ಬಲದಿಕ್ಕಿಗಿರಬೇಕು. ಮೂರರಿಂದ ಐದುಬಾರಿ ಉಸಿರಾಟ ಮಾಡುವಷ್ಟು ಕಾಲ ಈ ಸ್ಥಿತಿಯಲ್ಲಿದ್ದು, ಬಳಿಕ ಆರಂಭಿಕ ಸ್ಥಿತಿಗೆ ಮರಳಿ. ನಂತರ,