ಕಳೆದ ವಾರ ಪದ್ಮಾಸನದ ಬಗ್ಗೆ ತಿಳಿದುಕೊಂಡಿದ್ದೆವು. ಪದ್ಮಾಸನವನ್ನು ನೀವೀಗ ಪಳಗಿಸಿಕೊಂಡಿದ್ದೀರಿ. ಬನ್ನಿ ಈ ವಾರ ವಜ್ರಾಸನವನ್ನು ತಿಳಿದುಕೊಳ್ಳೋಣ.ವಜ್ರಾಸನದ ನಿಯಮಿತ ಅಭ್ಯಾಸವು ದೇಹವನ್ನು ವಜ್ರದಂತೆ ಸ್ಥಿರ ಹಾಗೂ ಸುದೃಢವಾಗಿರಿಸುತ್ತದೆ. ಸಂಸ್ಕೃತದಲ್ಲಿ ವಜ್ರ ಅಂದರೆ ಕಠಿಣ ಎಂದರ್ಥ. ಈ ಭಂಗಿಯ ಯೋಗಾಭ್ಯಾಸ ನಿರತ ವ್ಯಕ್ತಿಯು ವಜ್ರದಂತೆ ಕಂಡುಬರುವ ಕಾರಣಕ್ಕೆ ಇದಕ್ಕೆ ವಜ್ರಾಸನ ಎಂದು ಹೆಸರು.ವಿಧಾನ * ಸುಖಾಸನ ಸ್ಥಿತಿಗೆ ಬನ್ನಿ* ನೇರವಾಗಿ ಕುಳಿತುಕೊಳ್ಳಿ* ಕಾಲುಗಳನ್ನು ಮುಂದಕ್ಕೆ ಚಾಚಿ* ಒಂದಾದ ಬಳಿಕ ಒಂದರಂತೆ ಕಾಲುಗಳನ್ನು