ಸರ್ವಾಂಗಾಸನ ಎಂಬುದು ಮೂರು ಪದಗಳ, ಪದಗುಚ್ಚ. ಅದು ಸರ್ವ, ಅಂಗ, ಆಸನ. ಸರ್ವ ಎಂದರೆ ಎಲ್ಲಾ, ಅಂಗ ಎಂದರೆ ಭಾಗ, ಆಸನ ಎಂದರೆ ಯೋಗ ಭಂಗಿ. ಹಾಗಾಗಿ ಇಡೀ ದೇಹಕ್ಕೆ ವ್ಯಾಯಾಮ ಲಭಿಸುವ ಈ ಆಸನಕ್ಕೆ ಸರ್ವಾಂಗಾಸನ ಎಂದು ಹೆಸರು.ಸರ್ವಾಂಗಾಸನ ಮಾಡುವ ವಿಧಾನ ನೆಲದ ಮೇಲೆ ರಗ್ ಅಥವಾ ಚಾಪೆ ಹಾಸಿ ಅಂಗಾತ ಮಲಗಿ. ದೇಹವನ್ನು ನೆಟ್ಟಗಾಗಿಸಿ. ಕಾಲುಗಳನ್ನು ನೇರವಾಗಿಸಿ, ಕೈಗಳನ್ನು ಅಂಗೈ ಕೆಳಮುಖವಾಗಿ ಹಗುರವಾಗಿರಿಸಿ. ನಿಧಾನವಾಗಿ ಉಸಿರಾಡಿ. ಮೊಣಕಾಲುಗಳನ್ನು