ವಿಪರೀತ ಕರಣಿ ಮತ್ತು ಸರ್ವಾಂಗಸನದ ಮೇಲೆ ಪ್ರಭುತ್ವ ಸಾಧಿಸಿದ್ದರೆ ಮಾತ್ರ ನೀವು ಹಲಾಸನದ ಅಭ್ಯಾಸ ನಡೆಸಬೇಕು. ಹಲಾಸನವು ಪಶ್ಚಿಮೋತ್ತಾಸನಕ್ಕೆ ಪೂರಕವಾದುದು. ಚಕ್ರಾಸನ ಮತ್ತು ಮತ್ಸ್ಯಾಸನಗಳು ಹಲಾಸನದ ವಿರುದ್ಧ ಭಂಗಿಯ ಆಸನ.ಸಂಸ್ಕೃತದ ಹಲ ಮತ್ತು ಆಸನ ಎಂಬೆರಡು ಶಬ್ದಗಳು ಸೇರಿ ಹಲಾಸನ ರೂಪುಗೊಂಡಿದೆ. ಹಲ ಎಂದರೆ ನೇಗಿಲು ಎಂದೂ, ಆಸನ ಎಂದರೆ ಯೋಗಭಂಗಿ ಎಂದೂ ಅರ್ಥ. ಹಾಗಾಗಿ ಹಲಾಸನದ ವೇಳೆ ಯೋಗಿಯ ದೇಹವು ಭಾರತೀಯ ಸಾಂಪ್ರದಾಯಿಕ ನೇಗಿಲಿನ ಆಕಾರದಂತಾಗುವ ಕಾರಣ ಇದಕ್ಕೆ