ಶನಿದೇವನನ್ನು ಮನೆಯಲ್ಲಿ ಪೂಜಿಸದಿರಲು ಕಾರಣವೇನು ಗೊತ್ತಾ?

ಬೆಂಗಳೂರು| pavithra| Last Modified ಮಂಗಳವಾರ, 6 ಏಪ್ರಿಲ್ 2021 (07:59 IST)
ಬೆಂಗಳೂರು : ಹಿಂದೂಧರ್ಮದಲ್ಲಿ ಎಲ್ಲಾ ದೇವರ ಫೋಟೊವನ್ನು ಮನೆಯಲ್ಲಿಟ್ಟು ಪೂಜಿಸಲಾಗುತ್ತದೆ. ಆದರೆ ಶನಿದೇವನನ್ನು ಪೂಜಿಸುವುದರಿಂದ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದ್ದರೂ ಕೂಡ ಶನಿದೇವನ  ಫೋಟೊವನ್ನು ಮಾತ್ರ  ಮನೆಯಲ್ಲಿಟ್ಟು ಪೂಜೆ ಮಾಡುವುದಿಲ್ಲ. ಇದಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳೋಣ.

ಶನಿದೇವನನ್ನು ಶಾಪಗ್ರಸ್ತನೆಂದು ನಂಬಲಾಗಿದೆ. ಶನಿದೇವನು ದೃಷ್ಟಿ ಹಾಯಿಸಿದ ಕಡೆ ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಶನಿದೇವನ ದೃಷ್ಟಿಯನ್ನು ತಪ್ಪಿಸಿಕೊಳ್ಳಲು ಅವರ ವಿಗ್ರಹವನ್ನು ಅಥವಾ ಫೋಟೊವನ್ನು ಮನೆಯಲ್ಲಿಟ್ಟು ಪೂಜಿಸುವುದಿಲ್ಲ.

ಒಂದು ವೇಳೆ ಶನಿದೇವನನ್ನು ಪೂಜಿಸಬೇಕೆನಿಸಿದರೆ ದೇವಾಲಯಕ್ಕೆ ಹೋಗಬೇಕು. ಮತ್ತು ಅಲ್ಲಿ ಶನಿದೇವನ ಮೂರ್ತಿಯನ್ನು ನೋಡುವಾಗ ಮೊದಲು ದೇವರ ಪಾದಗಳನ್ನು ನೋಡಬೇಕು. ಆದರೆ ಆತನ ಕಣ‍್ಣುಗಳನ್ನು ನೋಡಬಾರದು.ಇದರಲ್ಲಿ ಇನ್ನಷ್ಟು ಓದಿ :