ಆಷಾಢ ಅಮಾವಾಸ್ಯೆಯಂದು ಅಕ್ಕಿ ಮತ್ತು ಮೊಸರಿನಿಂದ ಹೀಗೆ ಮಾಡಿದರೆ ಅದೃಷ್ಟ ನಿಮ್ಮದಾಗುತ್ತದೆಯಂತೆ

ಬೆಂಗಳೂರು| pavithra| Last Modified ಶನಿವಾರ, 18 ಜುಲೈ 2020 (13:09 IST)
ಬೆಂಗಳೂರು : ಜುಲೈ 20ರಂದು ಆಷಾಢ ಅಮಾವಾಸ್ಯೆ ಇದ್ದು,ಇದು  ಸೋಮವಾರ ಬರುತ್ತಿರುವುದರಿಂದ ಇದು ಅತ್ಯಂತ ಪ್ರಭಾವಶಾಲಿಯಾಗಿದೆ ಎನ್ನಲಾಗಿದೆ. ಅಂದು ಅಕ್ಕಿ ಮತ್ತು ಮೊಸರಿನಿಂದ ಹೀಗೆ ಮಾಡಿದರೆ ಅದೃಷ್ಟ ನಿಮ್ಮದಾಗುತ್ತದೆಯಂತೆ.

ಆಷಾಢ ಅಮಾವಾಸ್ಯೆಯ ಸೋಮವಾರದಂದು ಮುಂಜಾನೆ ಎದ್ದು ಅಕ್ಕಿಯಿಂದ ಅನ್ನ ಮಾಡಿ , ಆ ಅನ್ನದ ಮೇಲೆ ಮೊಸರು ಹಾಕಿ, ಮೊಸರಿನ ಮೇಲೆ ಇಟ್ಟು ಆಷಾಢ ಪೂಜೆ ಎಲ್ಲಾ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಬೇಕು. ಬಳಿಕ ಸಾಮ್ರಾಣಿ ಹೊಗೆ ಹಿಡಿಯಬೇಕು. ಬಳಿಕ ಮನೆಯಿಂದ ಹೊರಗೆ ಬಂದು ಮನೆ ಬಾಗಿಲು ಮುಚ್ಚಬೇಕು. ಬಳಿಕ ಸ್ವಲ್ಪ ಹೊತ್ತು ಬಿಟ್ಟು  ಒಳಗೆ ಹೋಗಿ ಆ ಪ್ರಸಾದವನ್ನು ನಿಮ್ಮ ಮನೆಯವರು ಮಾತ್ರ ಸೇವಿಸಬೇಕು. ಇದರಿಂದ ನಿಮ್ಮ ಮನೆಯಲ್ಲಿ ಅದೃಷ್ಟ ತುಂಬಿ ತುಳುಕುತ್ತದೆಯಂತೆ.
ಇದರಲ್ಲಿ ಇನ್ನಷ್ಟು ಓದಿ :