ಸತ್ತ ಮೇಲೆ ಸ್ವರ್ಗಕ್ಕೆ ಹೊಗುವ ಸುಲಭ ದಾರಿ ಇಲ್ಲಿದೆ ನೋಡಿ

ಬೆಂಗಳೂರು| pavitra| Last Modified ಮಂಗಳವಾರ, 3 ಜುಲೈ 2018 (15:53 IST)
ಜ್ಯೋತಿಷ್ಯ ಶಾಸ್ತ್ರ ಹಾಗೂ ಪುರಾಣಗಳಲ್ಲಿ ಮೃತ್ಯುವಿನ  ನಂತರ ಭೂಮಿ ಮೇಲೆ ಪಾಪ ಮಾಡಿದವರ ಆತ್ಮ ನರಕಕ್ಕೆ ಹಾಗೂ ಪುಣ್ಯ ಮಾಡಿದವರ ಆತ್ಮ ಸ್ವರ್ಗಕ್ಕೆ ಹೋಗುತ್ತದೆ  ಎಂದು ನಂಬಲಾಗಿದೆ. ಹಾಗೇ ಪುರಾಣಗಳಲ್ಲಿ ಮರಣದ ವೇಳೆ ವ್ಯಕ್ತಿ ಬಳಿ ಈ  ವಸ್ತುಗಳಲ್ಲಿ ಒಂದು ವಸ್ತುವಿದ್ದರೂ ವ್ಯಕ್ತಿಯನ್ನು ನರಕಕ್ಕೆ ಕರೆದೊಯ್ಯಲು ಯಮರಾಜನಿಂದ ಸಾಧ್ಯವಿಲ್ಲ ಎಂಬುದಾಗಿ ಹೇಳಲಾಗಿದೆ.
ಮರಣದ ವೇಳೆ ತುಳಸಿ ಗಿಡ ಅಥವಾ ತುಳಸಿ ಎಲೆ ತಲೆ ಮೇಲಿದ್ದರೆ ಯಮರಾಯನ ಭಯವಿರುವುದಿಲ್ಲ. ತುಳಸಿ ವಿಷ್ಣು ಪ್ರಿಯ. ವಿಷ್ಣುವಿನ ತಲೆ ಮೇಲೆ ಸದಾ ಇರುವಂತಹದ್ದು. ಹಾಗಾಗಿ ಮುಕ್ತಿ ದಾರಿ ಸುಲಭವಾಗುತ್ತದೆ.
 
ಸಾವಿನ ವೇಳೆ ಗಂಗಾಜಲವನ್ನು ಬಾಯಿಗೆ ಬಿಡುವುದ್ರಿಂದ ಅಥವಾ ಮುಖಕ್ಕೆ ಹಾಕುವುದ್ರಿಂದ ಯಮ ವ್ಯಕ್ತಿಯನ್ನು ನರಕಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಗಂಗಾಜಲ ಬಾಯಿಗೆ ಬೀಳ್ತಿದ್ದಂತೆ ವ್ಯಕ್ತಿಯ ಪಾಪವೆಲ್ಲ ತೊಲಗಿ ಪುಣ್ಯ ಲಭಿಸುತ್ತದೆ ಎಂದು ನಂಬಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :