ಈ ಘಟನೆಯಿಂದ ತಿಳಿಬಹುದು ನಿಮಗೆ ಮುಂದೆ ಎದುರಾಗುವ ಸಮಸ್ಯೆ ಯಾವುದೆಂದು

ಬೆಂಗಳೂರು| pavithra| Last Modified ಬುಧವಾರ, 4 ಜುಲೈ 2018 (11:38 IST)
ಬೆಂಗಳೂರು : ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ಮೊದಲೇ ಮುನ್ಸೂಚನೆ ಸಿಗಲಿದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಅನೇಕ ಬಾರಿ ನಾವು ಆ ಘಟನೆಗಳನ್ನು ನಿರ್ಲಕ್ಷಿಸುತ್ತೇವೆ. ಆದ್ರೆ ಆ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಲ್ಲಿ ಮುಂದಾಗುವ ಸಮಸ್ಯೆಗಳಿಂದ
ತಪ್ಪಿಸಬಹುದಾಗಿದೆ.


ನೀರು ತುಂಬಿರುವ ಲೋಟ ಕೈತಪ್ಪಿ ಕೆಳಗೆ ಬಿದ್ರೆ ಮುಂದೆ ದೊಡ್ಡ ರೋಗ ಕಾಡಲಿದೆ ಎಂದರ್ಥ.

ಊಟಕ್ಕೆ ಬಳಸುವ ಎಣ್ಣೆ ಕೈತಪ್ಪಿ ಕೆಳಗೆ ಬಿದ್ರೆ ಖರ್ಚು ಹೆಚ್ಚಾಗಲಿದೆ. ಈ ತೈಲವನ್ನು ತಾಯಿ ಲಕ್ಷ್ಮಿ ಸಂಕೇತವೆಂದು ಪರಿಗಣಿಸಲಾಗಿದೆ.


ಪೂಜೆ ವೇಳೆ ಅಥವಾ ಆರತಿ ವೇಳೆ ದೀಪ ಆರಿದ್ರೆ ಕುಟುಂಬದ ವ್ಯಕ್ತಿಯೊಬ್ಬರ ಪ್ರಾಣಕ್ಕೆ ಅಪಾಯವಿದೆ ಎಂದರ್ಥ.

ಗೃಹಿಣಿ ಕೈನಿಂದ ಕುಂಕುಮ ಕೆಳಗೆ ಬಿದ್ದಲ್ಲಿ ಆಕೆ ಪತಿ ಜೀವಕ್ಕೆ ತೊಂದರೆಯಿದೆ ಎಂದು ನಂಬಲಾಗಿದೆ.

ಕೈನಿಂದ ಉಪ್ಪು ಬಿದ್ದರೆ ಮುಂದಿನ ಜನ್ಮದಲ್ಲಿ ಕಷ್ಟ ಎದುರಾಗಲಿದೆ ಎಂದರ್ಥ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :