ಇಂದಿನ ರಾಶಿ ಭವಿಷ್ಯ ಹೀಗಿದೆ

ಬೆಂಗಳೂರು| pavithra| Last Modified ಸೋಮವಾರ, 21 ಸೆಪ್ಟಂಬರ್ 2020 (07:38 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಇಂದು ನಿಮ್ಮ ಆರೋಗ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮ್ಮ ಸುತ್ತಲಿನ ಜನರು ನಿಮ್ಮ ಸ್ಥೈರ್ಯ ಮತ್ತು ಚೈತನ್ಯಗಳನ್ನು ಹೆಚ್ಚಿಸುತ್ತಾರೆ.
*ವೃಷಭ ರಾಶಿ: ಇಂದು  ಕುಟುಂಬದಲ್ಲಿ ಹೊಸ  ಸದಸ್ಯರ ಆಗಮನವಾಗಬಹುದು.
*ಮಿಥುನ ರಾಶಿ :ಇಂದು ಹೊಸ ಪ್ರಸ್ತಾಪಗಳು ಆಕರ್ಷಕವಾಗಿದ್ದರೂ ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. 
*ಕಟಕ ರಾಶಿ : ಇಂದು ಕೆಲಸದಲ್ಲಿ ಹಿರಿಯರಿಂದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು.
*ಸಿಂಹ ರಾಶಿ : ಇಂದು ನಿಮ್ಮ ಆಪ್ತರಿಂದ ಸಲಹೆ ಪಡೆಯುವುದರಿಂದ ಆರ್ಥಿಕ ಲಾಭವಾಗಬಹುದು.
*ಕನ್ಯಾ ರಾಶಿ : ಇಂದು ನೀವು ನಿಕಟ ವ್ಯಕ್ತಿಯನ್ನು ಭೇಟಿಯಾಗಲಿದ್ದು, ಅವರ ಜೊತೆ ಹೆಚ್ಚು ಸಮಯ ಕಳೆಯುತ್ತೀರಿ.
*ತುಲಾ ರಾಶಿ :  ಇಂದು ನಿಮಗೆ ವ್ಯಾಪಾರದಲ್ಲಿ ಹಾನಿಯುಂಟಾಗಬಹುದು. ಬಹಳ ಎಚ್ಚರಿಕೆಯಿಂದಿರಿ.
*ವೃಶ್ಚಿಕ ರಾಶಿ : ಇಂದು ಪ್ರಯಾಣದ ನಿಮಿತ್ತ ನಿಮಗೆ ಹೊಸ ಸ್ಥಳಗಳನ್ನು ನೋಡಲು ಮತ್ತು ಪ್ರಮುಖರನ್ನು ಭೇಟಿಯಾಗಲು ನಿಮಗೆ ಅವಕಾಶ ಸಿಗುತ್ತದೆ.
*ಧನು ರಾಶಿ : ಇಂದು ನೀವು ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶ ಕೂಡಿಬರಬಹುದು. ಇದರಿಂದ ನಿಕಟ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದುತ್ತೀರಿ.
*ಮಕರ ರಾಶಿ : ಇಂದು ತಾತ್ಕಾಲಿಕ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ನಿಮ್ಮ ನೆರವು ಅಗತ್ಯವಿರುವವರ ಸ್ನೇಹಿತರನ್ನು ಭೇಟಿ ಮಾಡಿ.
*ಕುಂಭ ರಾಶಿ : ನಿಮ್ಮ ಕುಟುಂಬ ಸದಸ್ಯರೆಡೆಗೆ ನಿಮ್ಮ ಸರ್ವಾಧಿಕಾರಿ ಧೋರಣೆ ಕೇವಲ ಅನುಪಯುಕ್ತ ವಾದಗಳನ್ನು ಪ್ರಾರಂಭಿಸುತ್ತದೆ.
* ಮೀನ ರಾಶಿ : ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವ ಮೂಲಕ ನೀವು ನಿಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸುತ್ತೀರಿ.ಇದರಲ್ಲಿ ಇನ್ನಷ್ಟು ಓದಿ :