Widgets Magazine

ಇದೇ ಜನವರಿ 15ರಂದು ಅತೀ ದೊಡ್ಡ ಸೂರ್ಯಗ್ರಹಣ!

ಇಳಯರಾಜ|
ND
2009ರ ಜುಲೈ 22ರ ನಂತರ ಮತ್ತೆ ಇದೀಗ ಸೂರ್ಯಗ್ರಹಣದ ಕಾಲ ಹತ್ತಿರ ಬಂದಿದೆ. 1033 ವರ್ಷಗಳಿಗೊಮ್ಮೆ ಮಾತ್ರ ಕಾಣಿಸುವ ವಲಯಾಕಾರಾದ ಇದೇ ಜನವರಿ ತಿಂಗಳಲ್ಲಿ ನಡೆಯಲಿದೆ.

2009ರಲ್ಲಿ ಸೂರ್ಯಗ್ರಹಣವಾಗಿ ಈಗ ಏಳು ತಿಂಗಳ ನಂತರ ಇದೇ ಜನವರಿ 15 2010ರಂದು ಮತ್ತೆ ಸೂರ್ಯಗ್ರಹಣ ನಡೆಯಲಿದೆ. ಇದು ಅತ್ಯಂತ ಸುದೀರ್ಘ ಅವಧಿಯ ಸೂರ್ಯಗ್ರಹಣವಾಗಿದ್ದು, ಇಂತಹ ಅಪೂರ್ವ ಸೂರ್ಯಗ್ರಹಣದ ಅವಕಾಶ ಈ ಬಾರಿಯ ಸೂರ್ಯಗ್ರಹಣ ಹೊರತು ಪಡಿಸಿದರೆ ಮತ್ತೆ ಇಂಥದ್ದೇ ಗ್ರಹಣ ನೋಡಲು ಸಿಗುವುದು 3043ರ ಡಿಸೆಂಬರ್ 24ರಂದು. ಅಂದರೆ, 1033 ವರ್ಷಗಳ ನಂತರ ಇಷ್ಟು ದೀರ್ಘ ಅವಧಿಯ ಸೂರ್ಯಗ್ರಹಣ ಕಾಣಿಸಲಿದೆ. 1992ರ ಜನವರಿ 4ರಲ್ಲಿ ಇಂಥದ್ದೊಂದು ಸುದೀರ್ಘ ಸೂರ್ಯಗ್ರಹಣ ಸಂಭವಿಸಿದ್ದು ಬಿಟ್ಟರೆ, ಂತರ ಕಣುತ್ತಿರುವುದು ಇದೇ ಮೊದಲು. ಆಗ ಅದು 11 ನಿಮಿಷ 41 ಸೆಕೆಂಡುಗಳ ಕಾಲ ಸಂಭವಿಸಿತ್ತು.

ಗ್ರಹಣದ ಅತಿ ಹೆಚ್ಚು ಅವದಿ ಹಿಂದೂ ಮಹಾಸಾಗರದ ಸರಿಯಾದ ಮೇಲ್ಭಾಗದಲ್ಲಿ ಸುಮಾರು 11 ನಿಮಿಷ 8 ಸೆಕೆಂಡುಗಳ ಕಾಲ ಗೋಚರಿಸಲಿದೆ. ಹಾಗಾಗಿ ವಿಜ್ಞಾನಿಗಳ ಪ್ರಕಾರ, ಈ ಸೂರ್ಯಗ್ರಹಣ ಬಹುತೇಕ ದಕ್ಷಿಣ ಭಾರತದ ಮಂದಿಗೆ ಕಾಣ ಸಿಗಲಿದೆ. ಅದರಲ್ಲೂ, ರಾಮೇಶ್ವರ, ಕನ್ಯಾಕುಮಾರಿ ಮತ್ತಿತರ ದಕ್ಷಿಣ ತೀರಗಳಲ್ಲಿ ಕಾಣುವ ಸಾಧ್ಯತೆಗಳು ಹೆಚ್ಚು ಎನ್ನಲಾಗಿದೆ. ಈ ನಗರಗಳಲ್ಲಿ ಗ್ರಹಣ ಸುಮಾರು 10 ನಿಮಿಷಗಳ ಕಾಲ ಇರಲಿದೆ. ತಮಿಳುನಾಡಿನ ಹಲವೆಡೆ ಸೂರ್ಯಗ್ರಹಣ ಚೆನ್ನಾಗಿ ಗೋಚರಿಸಲಿದೆ. ಇದನ್ನು ಹೊರತುಪಡಿಸಿದರೆ ಸೂರತ್, ಅಹಮದಾಬಾದ್, ಕಚ್ ಮತ್ತಿತರ ಪ್ರದೇಶಗಳಲ್ಲೂ ಸೂರ್ಯಗ್ರಹಣ ಕಾಣಿಸಲಿದೆ.

ದೇಶದ ಉಳಿದ ನಗರಗಳಲ್ಲಿ ಗ್ರಹಣ ಸಂಪೂರ್ಣವಾಗಿ ಗೋಚರಿಸುವುದಿಲ್ಲವಾದರೂ, ಭಾಗಶಃ ಅರ್ಧ ಭಾಗ ಕಾಣಿಸಲಿದೆ. ಇದು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಾ ಹೋಗುತ್ತದೆ. ಈ ಸೂರ್ಯಗ್ರಹಣ ಜನವರಿ 15ರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗೆ ಗೋಚರವಾಗಲಿದೆ. ಉಜ್ಜಯಿನಿಯಲ್ಲಿ ಗ್ರಹಣದ ಅವಧಿಯನ್ನು ಬೆಳಿಗ್ಗೆ 11.35ರಿಂದ ಮದ್ಯಾಹ್ನ 3.11ರವರೆಗೆ ಗ್ರಹಣಕಾಲ ಎಂದು ಪರಿಗಣಿಸಲಾಗಿದೆ.

ಸೂರ್ಯಗ್ರಹಣ ನಾಲ್ಕು ವಿಧದಲ್ಲಿ ನಡೆಯಲಿದೆ. ಇದರಲ್ಲಿ ಮೊದಲನೆಯದು ಪೂರ್ಣ ಸೂರ್ಯಗ್ರಹಣ. ಈ ಪೂರ್ಣ ಸೂರ್ಯಗ್ರಹಣ, ಅತ್ಯಂತ ಆಕರ್ಷಕವಾಗಿ ಗೋಚರವಾಗುವ ಜೊತೆಗೆ ಡೈಮಂಡ್ ರಿಂಗ್ ಕೂಡಾ ಗೋಚರವಾಗುವುದು ವಿಶೇಷ. ಇಂತಹ ಸಂದರ್ಭದಲ್ಲಿ ಭೂಮಿಯಲ ಮೇಲೆ ಚರಾಚರ, ಹಾವುಗಳ ಚಲನೆ ಹೆಚ್ಚಾಗುತ್ತದೆ ಎಂಬ ಪ್ರತೀತಿಯೂ ಇದೆ. ಎರಡನೆಯದು ವಲಯಾಕಾರದ ಸೂರ್ಯಗ್ರಹಣ. ಈ ಸೂರ್ಯಗ್ರಹಣ ಬಳೆಯ ಆಕಾರದಲ್ಲಿ ಗೋಚರವಾಗುತ್ತದೆ. ಮೂರನೆಯ ಮಾದರಿ ಹೈಬ್ರಿಡ್ ಸೂರ್ಯಗ್ರಹಣ. ಈ ಮಾದರಿಯಲ್ಲಿ ಭೂಮಿಗೆ ಅತೀ ಸಮೀಪದಲ್ಲಿರುವುದರಿಂದ ಸೂರ್ಯನ ವಿಕಿರಣಗಳು ಮಾತ್ರ ಕಾಣಸಿಗುತ್ತವೆ. ನಾಲ್ಕೇ ಮಾದರಿ ಖಂಡಗ್ರಾಸ (ಆಂಶಿಕ) ಸೂರ್ಯಗ್ರಹಣ. ಈ ಮಾದರಿಯ ಸೂರ್ಯಗ್ರಹಣದಲ್ಲಿ ಚಂದ್ರ ಸೂರ್ಯನ ಅರ್ಧಕ್ಕೆ ಬಂದಿರುವುದು ಕಂಡುಬರುತ್ತದೆ.


ಇದರಲ್ಲಿ ಇನ್ನಷ್ಟು ಓದಿ :